Publish Date: Tue, 30 Mar 2021 (10:54 IST)
Updated Date: Tue, 30 Mar 2021 (10:56 IST)
ಮುಂಬೈ: ಕೊರೋನಾ ಎರಡನೇ ಅಲೆ ಯಾಕೋ ಸೆಲೆಬ್ರಿಟಿಗಳನ್ನೇ ಗುರಿಯಾಗಿಸಿದಂತಿದೆ. ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಕೊರೋನಾ ಸೋಂಕಿಗೊಳಗಾಗಿದ್ದಾರೆ ಎಂದು ವರದಿಯಾಗಿದೆ.
ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಸದ್ಯಕ್ಕೆ ತಮ್ಮ ಪಟಿಯಾಲದ ಮನೆಯಲ್ಲಿ ಹೋಂ ಕ್ವಾರಂಟೈನ್ ಗೊಳಗಾಗಿದ್ದಾರೆ ಎನ್ನಲಾಗಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯಲ್ಲೂ ಹರ್ಮನ್ ಭಾಗಿಯಾಗಿರಲಿಲ್ಲ. ಮಾರ್ಚ್ 17 ರಂದು ಏಕದಿನ ಪಂದ್ಯವಾಡಿದ್ದೇ ಕೊನೆ. ಅದಾದ ಬಳಿಕ ಅನಾರೋಗ್ಯಕ್ಕೀಡಾಗಿದ್ದರು.
ಇದಕ್ಕೂ ಮೊದಲು ರೋಡ್ ಸೇಫ್ಟೀ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡಿದ್ದ ಸಚಿನ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಬದರೀನಾಥ್ ಕೊರೋನಾ ಸೋಂಕಿಗೊಳಗಾಗಿರುವುದಾಗಿ ಹೇಳಿಕೊಂಡಿದ್ದರು.
Krishnaveni K
Publish Date: Tue, 30 Mar 2021 (10:54 IST)
Updated Date: Tue, 30 Mar 2021 (10:56 IST)