Publish Date: Tue, 30 Mar 2021 (10:30 IST)
Updated Date: Tue, 30 Mar 2021 (10:31 IST)
ಬೆಂಗಳೂರು: ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ಸಲಗ ಸಿನಿಮಾದ ಪ್ರಿರಿಲೀಸ್ ಈವೆಂಟ್ ಏಪ್ರಿಲ್ 10 ರಂದು ಹೊಸಪೇಟೆಯಲ್ಲಿ ನಡೆಯಲಿದೆ.
ಕೊರೋನಾದಿಂದಾಗಿ ಸರ್ಕಾರ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿದೆ. ಇದರ ನಡುವೆಯೂ ವಿಜಿ ಪ್ರಿ ರಿಲೀಸ್ ಈವೆಂಟ್ ಆಯೋಜಿಸಲು ತೀರ್ಮಾನಿಸಿದ್ದಾರೆ.
ಈಗಾಗಲೇ ಸಲಗ ಚಿತ್ರದ ಪ್ರಮೋಷನ್ ಶುರು ಮಾಡಿಕೊಂಡಿರುವ ಚಿತ್ರತಂಡ ಪ್ರಮೋಷನಲ್ ಹಾಡೊಂದನ್ನು ಬಿಡುಗಡೆ ಮಾಡಿದೆ. ಹಾಡಿನ ಜೊತೆಗೆ ಪ್ರಮೋಷನ್ ಕೂಡಾ ಭರದಿಂದ ಸಾಗಿದ್ದು, ಏಪ್ರಿಲ್ 15 ಕ್ಕೆ ಚಿತ್ರ ತೆರೆಗೆ ಬರಲಿದೆ. ದುನಿಯಾ ವಿಜಯ್ ಜೊತೆಗೆ ಡಾಲಿ ಧನಂಜಯ್ ಕೂಡಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.