Publish Date: Mon, 29 Mar 2021 (11:03 IST)
Updated Date: Mon, 29 Mar 2021 (11:04 IST)
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಸಿಡಿಯದ್ದೇ ಸುದ್ದಿ. ರಮೇಶ್ ಜಾರಕಿಹೊಳಿ ಸಿಡಿ ವಿವಾದ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಮೇಲಿನ ಆರೋಪ ಇದೆಲ್ಲದರ ಬಗ್ಗೆ ನವರಸನಾಯಕ ಜಗ್ಗೇಶ್ ಒಂದೇ ಪದದಲ್ಲಿ ಉತ್ತರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಬಿಜೆಪಿ ವಕ್ತಾರರಾಗಿರುವ ಜಗ್ಗೇಶ್ ಯಾರ ಮೇಲೂ ನೇರವಾಗಿ ಆರೋಪ ಮಾಡದೇ ಹಾಡಿನ ಮೂಲಕ ಚಾಟಿ ಬೀಸಿದ್ದಾರೆ.
ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಎಚ್ ಡಿ ಕುಮಾರಸ್ವಾಮಿ ನನ್ನ ನಿರ್ಮಾಪಕ. ಡಿಕೆ ಶಿವಕುಮಾರ್ ನನ್ನನ್ನು ರಾಜಕೀಯಕ್ಕೆ ಕರೆತಂದವರು. ಎಲ್ಲಾ ಕ್ಷೇತ್ರದಲ್ಲೂ ಈಗ ಪ್ರಾಮಾಣಿಕತೆಗಿಂತ ವಾಮಮಾರ್ಗವೇ ಪ್ರಧಾನವಾಗಿದೆ ಎಂದು ಜಗ್ಗೇಶ್ ಹೇಳಿದ್ದಾರೆ.