Publish Date: Mon, 29 Mar 2021 (09:20 IST)
Updated Date: Mon, 29 Mar 2021 (09:25 IST)
ತಿರುವನಂತಪುರಂ: ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೆಲವು ಸ್ಥಾನಗಳನ್ನಾದರೂ ಗೆದ್ದು ಕಿಂಗ್ ಮೇಕರ್ ಆಗುವ ಕನಸಿದೆ.
ಕೇರಳದಲ್ಲಿ ಇದುವರೆಗೆ ಬಿಜೆಪಿ ಸಾಧನೆ 1 ಸ್ಥಾನಕ್ಕಿಂತ ಹೆಚ್ಚಾಗಿಲ್ಲ. ಆದರೆ ಈ ಬಾರಿ ಮೂರ್ನಾಲ್ಕು ಸ್ಥಾನಗಳನ್ನಾದರೂ ಗೆದ್ದು ಕಿಂಗ್ ಮೇಕರ್ ಆಗಲು ಶತ ಪ್ರಯತ್ನ ನಡೆಸಿದೆ. ಇದಕ್ಕಾಗಿ ಸ್ವತಃ ಬಿಜೆಪಿಯ ಚಾಣಕ್ಷ್ಯ ಅಮಿತ್ ಶಾ ದೇವರ ನಾಡಿಗೆ ಎಂಟ್ರಿ ಕೊಟ್ಟಿದ್ದಾರೆ.
ಪ್ರತೀ ಬಾರಿಯೂ ಕೇರಳದಲ್ಲಿ ಎಲ್ ಡಿಎಫ್ ಮತ್ತು ಯುಡಿಎಫ್ ಒಂದಾದ ಮೇಲೊಂದರಂತೆ ಅಧಿಕಾರ ನಡೆಸಿದೆ. ಆದರೆ ಈ ಬಾರಿ ಆಡಳಿತಾರೂಢ ಎಲ್ ಡಿಎಫ್ ಪರ ಅಲೆಯಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಮತ್ತೆ ಅಧಿಕಾರಕ್ಕೇರುವುದು ಸುಲಭದ ಮಾತಲ್ಲ.
ಹೀಗಾಗಿ ಬಿಜೆಪಿ ಇವೆರಡರ ಲಾಭ ಪಡೆದುಕೊಂಡು ಒಂದಷ್ಟು ಸ್ಥಾನ ಗೆದ್ದು, ಸರ್ಕಾರ ರಚನೆ ಸಂದರ್ಭದಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ.