Publish Date: Sun, 28 Mar 2021 (10:26 IST)
Updated Date: Sun, 28 Mar 2021 (10:28 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಆನ್ ಲೈನ್ ಟಿಕೆಟ್ ಬುಕಿಂಗ್ ಶುರುವಾಗಿದೆ.
ಟಿಕೆಟ್ ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಕೆಲವೆಡೆ ಟಿಕೆಟ್ ಸೋಲ್ಡ್ ಔಟ್ ಆದರೆ ಮತ್ತೆ ಕೆಲವು ಕಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.ಇದು ಚಿತ್ರತಂಡಕ್ಕೆ ಭರ್ಜರಿ ಖುಷಿ ಕೊಟ್ಟಿದೆ.
ಏಪ್ರಿಲ್ 1 ರಂದು ಯುವರತ್ನ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಪುನೀತ್, ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರತಂಡ ತೆಲುಗಿನಲ್ಲೂ ಪ್ರಚಾರ ಶುರು ಮಾಡಿದೆ. ಪೊಗರು, ರಾಬರ್ಟ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಮತ್ತೊಂದು ಅದ್ಧೂರಿ ಸಿನಿಮಾವಿದು.