Publish Date: Sat, 27 Mar 2021 (11:11 IST)
Updated Date: Sat, 27 Mar 2021 (11:12 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ರಿಯಲ್ ಜೋಡಿ ದಿಗಂತ್ ಮಂಚಾಲೆ-ಐಂದ್ರಿತಾ ರೇ ಈಗ ರಜೆಯ ಮಜಾ ಮಾಡುತ್ತಿದ್ದಾರೆ.
ದಿಗಂತ್-ಐಂದ್ರಿತಾ ಈಗ ಸಿನಿಮಾ ಶೂಟಿಂಗ್ ನಿಂದ ಬಿಡುವು ಪಡೆದಿದ್ದು, ಮಾಲ್ಡೀವ್ಸ್ ದ್ವೀಪದಲ್ಲಿ ರೊಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿದ್ದಾರೆ. ಇಬ್ಬರೂ ತಮ್ಮಿಬ್ಬರ ರೊಮ್ಯಾಂಟಿಕ್ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ.
ಹಲವು ದಿನಗಳಿಂದ ಕಾಯುತ್ತಿದ್ದ ಬ್ರೇಕ್ ಈಗ ಸಿಕ್ಕಿದೆ. ಕೊನೆಗೂ ನಾವು ಇಲ್ಲಿಗೆ ಬಂದಿದ್ದೇವೆ ಎಂದು ದಿಗಂತ್-ಐಂದ್ರಿತಾ ಇಬ್ಬರೂ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಇಬ್ಬರೂ ಎಂಟು ವರ್ಷಗಳ ಬಳಿಕ ಜೊತೆಯಾಗಿ ನಟಿಸಿರುವ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಈ ವರ್ಷ ಬಿಡುಗಡೆಯಾಗುತ್ತಿದೆ.