Select Your Language

Notifications

webdunia
webdunia
webdunia
webdunia

ಕೊರೋನಾ ಹೆಚ್ಚಳದಿಂದ ಆತಂಕಕ್ಕೀಡಾಗಿರುವ ಬಿಗ್ ಬಜೆಟ್ ಸಿನಿಮಾಗಳು

ಕೊರೋನಾ ಹೆಚ್ಚಳದಿಂದ ಆತಂಕಕ್ಕೀಡಾಗಿರುವ ಬಿಗ್ ಬಜೆಟ್ ಸಿನಿಮಾಗಳು
ಬೆಂಗಳೂರು , ಶನಿವಾರ, 27 ಮಾರ್ಚ್ 2021 (09:05 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರ ಮೊಗದಲ್ಲೂ ಚಿಂತೆ ಆವರಿಸಿದೆ.

 
ಈಗಾಗಲೇ ಯುವರತ್ನ, ಕೋಟಿಗೊಬ್ಬ 3, ಸಲಗ ಬಿಡುಗಡೆಗೆ ದಿನಾಂಕ ನಿಗದಿಪಡಿಸಿಕೊಂಡು ಕಾದಿದೆ. ಆ ಪೈಕಿ ಕೋಟಿಗೊಬ್ಬ 3 ಇನ್ನೂ ಪಕ್ಕಾ ದಿನಾಂಕ ಘೋಷಿಸಿಲ್ಲವಾದರೂ ಏಪ್ರಿಲ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಯೋಜನೆ ನಡೆಸಿದೆ. ಇನ್ನು ದುನಿಯಾ ವಿಜಯ್ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುತ್ತೇವೆ. ಚಿತ್ರಮಂದಿರಕ್ಕೆ ನಿರ್ಬಂಧ ಹೇರಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಆದರೆ ಈಗ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವುದು ನೋಡಿದರೆ ಎಲ್ಲಿ ಸರ್ಕಾರ ಮತ್ತೆ ಶೇ. 50 ಪ್ರೇಕ್ಷಕರಿಗೆ ಅವಕಾಶ ನೀಡುವ ಹಳೆಯ ತೀರ್ಮಾನಕ್ಕೆ ಬಂದುಬಿಡುತ್ತದೋ ಎಂಬ ಆತಂಕ ನಿರ್ಮಾಪಕರಿಗೆ ಕಾಡಿದೆ. ಇದರಿಂದ ಅಂದುಕೊಂಡಷ್ಟು ಲಾಭ ಗಳಿಕೆಯಾಗಲ್ಲ. ಈಗಾಗಲೇ ನಷ್ಟದಲ್ಲಿರುವ ನಿರ್ಮಾಪಕರಿಗೆ ಈಗ ಕೊರೋನಾ ಎರಡನೇ ಅಲೆ ತಲೆನೋವು ತಂದಿಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಳಪತಿ 65 ಚಿತ್ರದಲ್ಲಿ ಇಬ್ಬರು ನಟಿಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಂತೆ ನಟ ವಿಜಯ್