Select Your Language

Notifications

webdunia
webdunia
webdunia
webdunia

ದಳಪತಿ 65 ಚಿತ್ರದಲ್ಲಿ ಇಬ್ಬರು ನಟಿಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಂತೆ ನಟ ವಿಜಯ್

ದಳಪತಿ 65 ಚಿತ್ರದಲ್ಲಿ ಇಬ್ಬರು ನಟಿಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಂತೆ ನಟ ವಿಜಯ್
ಚೆನ್ನೈ , ಶನಿವಾರ, 27 ಮಾರ್ಚ್ 2021 (08:59 IST)
ಚೆನ್ನೈ : ವಿಜಯ್ ಅವರು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರ ದಳಪತಿ 65 ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ.

ನಟಿ ಪೂಜಾ ಹೆಗ್ಡೆ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ವಿಚಾರ ಈಗಾಗಲೇ ಬಹಿರಂಗಗೊಂಡಿದೆ. ಅಲ್ಲದೇ ಈ ಚಿತ್ರದಲ್ಲಿ ಯೋಗಿ ಬಾಬು , ನವಾಜುದ್ದೀನ್ ಸಿದ್ದಿಕಿ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ.

ಆದರೆ ಈ ನಡುವೆ ಈ ಚಿತ್ರದಲ್ಲಿ ನಟ ವಿಜಯ್ ಅವರು ಇಬ್ಬರು ನಟಿಯರೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಕಾಲಿವುಡ್ ನ ವರದಿ ಪ್ರಕಾರ ರಶ್ಮಿಕಾ ಮಂದಣ್ಣ ಈ ಪಾತ್ರದ ಅಗ್ರ ಸ್ಪರ್ಧಿ ಎನ್ನಲಾಗಿದೆ. ಒಂದು ವೇಳೆ ರಶ್ಮಿಕಾ ಆಯ್ಕೆಯಾದರೆ ವಿಜಯ್ ಜೊತೆ ನಟಿಸುವ ಅವರ ಕನಸು ನನಸಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿಯಲ್ಲಿ ಪ್ರಸಾರವಾದ ಕ್ರ್ಯಾಕ್ ಚಿತ್ರಕ್ಕೆ ದೊರೆತ ಟಿಆರ್ ಪಿ ಎಷ್ಟು ಗೊತ್ತಾ?