Select Your Language

Notifications

webdunia
webdunia
webdunia
webdunia

ಮತ್ತೆ ಕನ್ನಡದಲ್ಲಿ ಹಾಡಿದ ಮ್ಯಾಜಿಕಲ್ ಗಾಯಕ ಸಿದ್ ಶ್ರೀರಾಮ್: ಏಪ್ರಿಲ್ 19 ಕ್ಕೆ ರಿಲೀಸ್

ಮತ್ತೆ ಕನ್ನಡದಲ್ಲಿ ಹಾಡಿದ ಮ್ಯಾಜಿಕಲ್ ಗಾಯಕ ಸಿದ್ ಶ್ರೀರಾಮ್: ಏಪ್ರಿಲ್ 19 ಕ್ಕೆ ರಿಲೀಸ್
ಬೆಂಗಳೂರು , ಶನಿವಾರ, 27 ಮಾರ್ಚ್ 2021 (10:32 IST)
ಬೆಂಗಳೂರು: ತೆಲುಗು, ತಮಿಳಿನಲ್ಲಿ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟ ಖ್ಯಾತ ಗಾಯಕ ಸಿದ್ ಶ್ರೀರಾಮ್ ಕನ್ನಡದಲ್ಲಿ ಮತ್ತೊಂದು ಹಾಡು ಹಾಡಿದ್ದಾರೆ.


ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದ ಹಾಡೊಂದಕ್ಕೆ ಸಿದ್ ಶ್ರೀರಾಮ್ ಧ್ವನಿ ನೀಡಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ ಕೂಡಾ ಮುಕ್ತಾಯವಾಗಿದೆ. ಏಪ್ರಿಲ್ 19 ಕ್ಕೆ ಹಾಡು ರಿಲೀಸ್ ಆಗುತ್ತಿರುವುದಾಗಿ ಜನ್ಯಾ ಹೇಳಿದ್ದಾರೆ.

ಇದು ಸಿದ್ ಶ್ರೀರಾಮ್ ಪಾಲಿಗೆ ಕನ್ನಡದಲ್ಲಿ ಎರಡನೇ ಹಾಡು. ಇದಕ್ಕೂ ಮೊದಲು ಸಿದ್ ಶ್ರೀರಾಮ್, ಹೊಸಬರ ‘ಟಾಮ್ ಆಂಡ್ ಜೆರ್ರಿ’ ಸಿನಿಮಾಗೆ ಹಾಡಿದ್ದರು. ಆ ಹಾಡು ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಇದೀಗ ಎರಡನೇ ಹಾಡು ರೆಕಾರ್ಡಿಂಗ್ ಮುಗಿಸಿದ್ದು, ಅದು ಏಪ್ರಿಲ್ 19 ಕ್ಕೆ ರಿಲೀಸ್ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಈ ಗುಣವನ್ನು ಮೆಚ್ಚಿದ ನಟಿಯರು