Select Your Language

Notifications

webdunia
webdunia
webdunia
webdunia

ಅಣ್ಣ ಯೂಸುಫ್ ಪಠಾಣ್ ಬಳಿಕ ತಮ್ಮ ಇರ್ಫಾನ್ ಪಠಾಣ್ ಗೂ ಕೊರೋನಾ ಸೋಂಕು

ಅಣ್ಣ ಯೂಸುಫ್ ಪಠಾಣ್ ಬಳಿಕ ತಮ್ಮ ಇರ್ಫಾನ್ ಪಠಾಣ್ ಗೂ ಕೊರೋನಾ ಸೋಂಕು
ಮುಂಬೈ , ಮಂಗಳವಾರ, 30 ಮಾರ್ಚ್ 2021 (10:10 IST)
ಮುಂಬೈ: ರೋಡ್ ಸೇಫ್ಟೀ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡ ಕ್ರಿಕೆಟಿಗರೆಲ್ಲಾ ಈಗ ಕೊರೋನಾ ಭೀತಿಯಲ್ಲಿದ್ದಾರೆ. ಸಚಿನ್, ಯೂಸುಫ್ ಪಠಾಣ್, ಬದರೀನಾಥ್ ಬಳಿಕ ಈಗ ಇರ್ಫಾನ್ ಪಠಾಣ್ ಕೂಡಾ ಕೊರೋನಾ ಸೋಂಕಿತರಾಗಿದ್ದಾರೆ.


ಸಚಿನ್ ತೆಂಡುಲ್ಕರ್ ಮೊದಲನೆಯವರಾಗಿ ಕೊರೋನಾ ಸೋಂಕಿಗೊಳಗಾಗಿದ್ದರು. ಅದಾದ ಬಳಿಕ ಯೂಸುಫ್ ಪಠಾಣ್ ಕೂಡಾ ಪಾಸಿಟಿವ್ ವರದಿ ಬಂದಿರುವುದಾಗಿ ಹೇಳಿದ್ದರು. ಇದಾದ ಬಳಿಕ ಎಸ್ ಬದರೀನಾಥ್ ಕೂಡಾ ಇದೇ ಸಮಾಚಾರ ನೀಡಿದ್ದರು.

ಇದೀಗ ಇರ್ಫಾನ್ ಪಠಾಣ್ ಸರದಿ. ಈ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡ ಕ್ರಿಕೆಟಿಗರು ಒಬ್ಬರಾದ ಮೇಲೊಬ್ಬರಂತೆ ಕೊರೋನಾ ತಗುಲಿರುವ ಸುದ್ದಿ ನೀಡುತ್ತಿದ್ದಾರೆ. ಭಾರತದಲ್ಲಿ ನಡೆದಿದ್ದ ಈ ಟೂರ್ನಮೆಂಟ್ ನಲ್ಲಿ ವಿದೇಶೀ ತಂಡಗಳೂ ಭಾಗಿಯಾಗಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೇಯಸ್ ಐಯ್ಯರ್ ಗೆ ಶಸ್ತ್ರಚಿಕಿತ್ಸೆ: 5 ತಿಂಗಳು ಕ್ರಿಕೆಟ್ ಗೆ ವಿರಾಮ