Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶ್ರೇಯಸ್ ಐಯ್ಯರ್ ಗೆ ಶಸ್ತ್ರಚಿಕಿತ್ಸೆ: 5 ತಿಂಗಳು ಕ್ರಿಕೆಟ್ ಗೆ ವಿರಾಮ

webdunia
ಮಂಗಳವಾರ, 30 ಮಾರ್ಚ್ 2021 (09:53 IST)
ಮುಂಬೈ: ಇಂಗ್ಲೆಂಡ್ ಸರಣಿಯಲ್ಲಿ ಭುಜದ ಗಾಯಕ್ಕೊಳಗಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಐಯರ್ ಶಸ್ತ್ರಚಿಕಿತ್ಸೆಗೊಳಗಾಗಲಿದ್ದು, ಬಳಿಕ 5 ತಿಂಗಳು ಕ್ರಿಕೆಟ್ ನಿಂದ ವಿಶ್ರಾಂತಿ ಪಡೆಯಲಿದ್ದಾರೆ.


ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಸರಣಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಶ್ರೇಯಸ್ ಐಯರ್ ಭುಜಕ್ಕೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ಇದರಿಂದಾಗಿ ಅವರು ಐಪಿಎಲ್ ನಿಂದಲೂ ಹೊರುಗುಳಿಯಲಿದ್ದಾರೆ.

ಸದ್ಯದಲ್ಲೇ ಶಸ್ತ್ರಚಿಕಿತ್ಸೆಗೊಳಗಾಗಲಿರುವ ಐಯರ್ ಸುಮಾರು 4-5 ತಿಂಗಳು ಕ್ರಿಕೆಟ್ ಆಡುವಂತಿಲ್ಲ. ಸೆಪ್ಟೆಂಬರ್ ನಲ್ಲಿ ದ.ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯಲಿದ್ದು, ಆ ಸರಣಿಗೆ ಐಯರ್ ವಾಪಸಾಗುವ ನಿರೀಕ್ಷೆಯಿದೆ. ಈ ಗಾಯ ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬಯೋ ಬಬಲ್ ನ ಪಾಡು ಹೇಳಿಕೊಂಡ ವಿರಾಟ್ ಕೊಹ್ಲಿ