Publish Date: Sat, 03 Apr 2021 (10:23 IST)
Updated Date: Sat, 03 Apr 2021 (10:26 IST)
ಹೈದರಾಬಾದ್ : ನಾಗಾರ್ಜುನ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ವೈಲ್ಡ್ ಡಾಗ್ ಏಪ್ರಿಲ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಜನರಿಂದ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.
ಈ ನಡುವೆ ನಾಗಾರ್ಜುನ್ ತಮ್ಮ ಟ್ವೀಟರ್ ನಲ್ಲಿ ತಮ್ಮ ಚಿತ್ರ ಬಿಡುಗಡೆಯ ಹಿಂದಿನ ದಿನ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗೇ ಚಿರಂಜೀವಿ ಅವರು ನಾಗಾರ್ಜುನ್ ಅವರಿಗಾಗಿ ರುಚಿಕರವಾದ ಚಿಕನ್ ಡಿನ್ನರ್ ತಯಾರಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಅಡುಗೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಫುಡ್ ತಯಾರಿಸುತ್ತಾರೆ.
ಮಾರ್ಚ್ ತಿಂಗಳಿನಲ್ಲಿ ಚಿರಂಜೀವಿ ವೈಲ್ಡ್ ಡಾಗ್ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದರು ಮತ್ತು ನಟ ನಾಗಾರ್ಜುನ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
pavithra
Publish Date: Sat, 03 Apr 2021 (10:23 IST)
Updated Date: Sat, 03 Apr 2021 (10:26 IST)