Select Your Language

Notifications

webdunia
webdunia
webdunia
webdunia

ಸಪ್ತಸಾಗರದಾಚೆ ಎಲ್ಲೋ ಟೀಸರ್ ಬಿಡುಗಡೆ

ಸಪ್ತಸಾಗರದಾಚೆ ಎಲ್ಲೋ ಟೀಸರ್ ಬಿಡುಗಡೆ
ಬೆಂಗಳೂರು , ಮಂಗಳವಾರ, 7 ಜೂನ್ 2022 (09:30 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಟೀಸರ್ ನಿನ್ನೆ ಸಂಜೆ ಲಾಂಚ್ ಆಗಿದೆ.

ನಿನ್ನೆ ರಕ್ಷಿತ್ ಬರ್ತ್ ಡೇ ಹಿನ್ನಲೆಯಲ್ಲಿ ಚಿತ್ರತಂಡ ಟೀಸರ್ ಗಿಫ್ಟ್ ನೀಡಿದೆ. ಈ ಟೀಸರ್ ನೋಡುತ್ತಿದ್ದರೆ ಇದು ಒಂದು ವಿಭಿನ್ನ ಪ್ರೇಮಕತೆ ಎನ್ನುವುದು ಸ್ಪಷ್ಟವಾಗುತ್ತದೆ.

ರಕ್ಷಿತ್ ಜೊತೆಗೆ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ಈ ಸಿನಿಮಾದ ನಿರ್ದೇಶಕರು. ಈ ಸಿನಿಮಾದಲ್ಲಿ ರಕ್ಷಿತ್ ಎರಡು ವಿಭಿನ್ನ ಶೇಡ್ ಗಳನ್ನು ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ಒಂದು ಬಿಡುಗಡೆ ಮಾಡಿದ್ದ ಚಿತ್ರತಂಡ ಕುತೂಹಲ ಸೃಷ್ಟಿಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ವಾಹಿನಿಗಳಲ್ಲಿ ಒಂದೇ ಬಾರಿಗೆ ರಿಯಲ್ ಜೋಡಿಗಳ ರಿಯಾಲಿಟಿ ಶೋ ಶುರು