Select Your Language

Notifications

webdunia
webdunia
webdunia
webdunia

ಚಾರ್ಲಿಗೆ ಎಂಟ್ರಿ ಕೊಡದ ಹೋಟೆಲ್ ಸಿಬ್ಬಂದಿ: ಬೇಸರ ವ್ಯಕ್ತಪಡಿಸಿದ ರಕ್ಷಿತ್ ಶೆಟ್ಟಿ

ಚಾರ್ಲಿಗೆ ಎಂಟ್ರಿ ಕೊಡದ ಹೋಟೆಲ್ ಸಿಬ್ಬಂದಿ: ಬೇಸರ ವ್ಯಕ್ತಪಡಿಸಿದ ರಕ್ಷಿತ್ ಶೆಟ್ಟಿ
ಬೆಂಗಳೂರು , ಸೋಮವಾರ, 6 ಜೂನ್ 2022 (16:21 IST)
ಬೆಂಗಳೂರು: 777 ಚಾರ್ಲಿ ಸಿನಿಮಾದಲ್ಲಿ ಚಾರ್ಲಿ ಎಂಬ ನಾಯಿ ಪ್ರಮುಖ ಪಾತ್ರ ವಹಿಸಿದೆ. ಈ ಕಾರಣಕ್ಕೆ ರಕ್ಷಿತ್ ಮತ್ತು ತಂಡ ಎಲ್ಲೇ ಪ್ರಮೋಷನ್ ಗೆ ಹೋದರೂ ಚಾರ್ಲಿಯನ್ನು ಕರೆದುಕೊಂಡು ಹೋಗುತ್ತಾರೆ.

ಆದರೆ ಬೆಂಗಳೂರಿನಲ್ಲಿ ಇಂದು ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆದಿತ್ತು. ಆದರೆ ಅಲ್ಲಿಗೆ ಚಾರ್ಲಿಯನ್ನು ಕರೆದುಕೊಂಡು ಬರಲು ಹೋಟೆಲ್ ಸಿಬ್ಬಂದಿ ಎಂಟ್ರಿ ಕೊಡಲಿಲ್ಲ.

ಇದು ರಕ್ಷಿತ್ ಬೇಸರಕ್ಕೆ ಕಾರಣವಾಯಿತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ರಕ್ಷಿತ್ ‘ನಮ್ಮ ಸಿನಿಮಾ ರಿಲೀಸ್ ಆದ ನಂತರ ತುಂಬಾ ಜನರಲ್ಲಿ ಬದಲಾವಣೆ ಆಗಿರುತ್ತದೆ. ಈ ಹೋಟೆಲ್ ನವರ ಮನಸ್ಸೂ ಚೇಂಜ್ ಆಗುತ್ತದೆ ಎಂದುಕೊಂಡಿದ್ದೇನೆ’ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೂಸೆ ವಾಲಾ ರೀತಿ ಕೊಲೆಯಾಗುತ್ತೀರಿ! ಸಲ್ಮಾನ್ ಖಾನ್ ಗೆ ಜೀವಬೆದರಿಕೆ ಪತ್ರ