Publish Date: Mon, 06 Jun 2022 (09:00 IST)
Updated Date: Mon, 06 Jun 2022 (09:18 IST)
ಹೊಸಪೇಟೆ: ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಕಂಚಿನ ಪ್ರತಿಮೆ ನಿನ್ನೆ ಸಂಜೆ ಹೊಸಪೇಟೆಯಲ್ಲಿ ಅನಾವರಣಗೊಂಡಿದೆ.
ಈ ಕಾರ್ಯಕ್ರಮದಲ್ಲಿ ಸಚಿವ ಆನಂದ್ ಸಿಂಗ್, ರಾಘವೇಂದ್ರ ರಾಜ್ ಕುಮಾರ್, ನಟ ಅಜೇಯ್ ರಾವ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.
ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಬಳಿಕ ರಾಘಣ್ಣ ತಮ್ಮ ಪ್ರತಿಮೆಯ ಕಾಲಿಗೆ ಪ್ರೀತಿಯಿಂದ ಮುತ್ತಿಕ್ಕಿ ಭಾವುಕರಾದ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಭಾರೀ ಜನ ಸೇರಿ ತಮ್ಮ ಮೆಚ್ಚಿನ ಪವರ್ ಸ್ಟಾರ್ ಅಪ್ಪುಗೆ ಜೈಕಾರ ಹಾಕಿ ಅಭಿಮಾನ ಮೆರೆದರು.