Publish Date: Mon, 06 Jun 2022 (08:50 IST)
Updated Date: Mon, 06 Jun 2022 (09:07 IST)
ಚೆನ್ನೈ: ಕಮಲ್ ಹಾಸನ್ ಅಭಿನಯದ ವಿಕ್ರಂ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಇದೀಗ ತಮಿಳುನಾಡಿನಲ್ಲಿ ದಳಪತಿ ವಿಜಯ್ ಸಿನಿಮಾ ಬೀಸ್ಟ್ ನ್ನೂ ವಿಕ್ರಂ ಹಿಂದಿಕ್ಕಿದೆ.
ಮೊದಲ ದಿನವೇ 58 ಕೋಟಿ ಗಳಿಕೆ ಮಾಡಿ ಎರಡನೇ ದಿನವೂ ಭರ್ಜರಿ ಗಳಿಕೆ ಮಾಡಿದ ವಿಕ್ರಂ, ವಿಜಯ್ ಅಭಿನಯದ ಬೀಸ್ಟ್ ದಾಖಲೆಯನ್ನು ಮುರಿದಿದೆ. ಬೀಸ್ಟ್ ಮೊದಲ ದಿನ 35 ಕೋಟಿ ಗಳಿಕೆ ದಾಟಿತ್ತು.
ಈ ಮೂಲಕ ಬೀಸ್ಟ್ ದಾಖಲೆಯನ್ನು ವಿಕ್ರಂ ಒಂದೇ ದಿನದಲ್ಲಿ ಉಡೀಸ್ ಮಾಡಿದೆ. ವಿಶ್ವದಾದ್ಯಂತ ವಿಕ್ರಂ ಬಿಡುಗಡೆಯಾಗಿದ್ದು ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.