ಚೆನ್ನೈ: ಆರ್ ಆರ್ ಆರ್, ಕೆಜಿಎಫ್ ಮುಂತಾದ ಪ್ಯಾನ್ ಇಂಡಿಯಾ ಸಿನಿಮಾಗಳು ಯಾರೂ ಮಾಡದೇ ಇರುವ ಪ್ರಯೋಗಗಳಲ್ಲ ಎಂದು ಬಹುಭಾಷಾ ನಟ ಕಮಲ್ ಹಾಸನ್ ಹೇಳಿದ್ದಾರೆ.
1960 ರಲ್ಲೇ ಪ್ಯಾನ್ ಇಂಡಿಯಾ ಎಂಬ ಕಾನ್ಸೆಪ್ಟ್ ಬಂದಿತ್ತು. ಕೆಜಿಎಫ್, ಆರ್ ಆರ್ ಆರ್ ಮಾಡಿರುವುದು ಹೊಸತೇನಲ್ಲ ಎಂದು ತಮ್ಮ ವಿಕ್ರಂ ಸಿನಿಮಾ ಪ್ರಮೋಷನ್ ವೇಳೆ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಸಂದರ್ಶಕರು ಇತ್ತೀಚೆಗೆ ಬಾಲಿವುಡ್ ಮತ್ತು ದ.ಭಾರತ ಸಿನಿಮಾಗಳ ನಡುವೆ ಪೈಪೋಟಿ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಿದಾಗ ನಾನು ಭಾರತೀಯ. ನೀವು ಯಾರು? ಎಂದು ಪ್ರಶ್ನೆ ಮಾಡುವ ಮೂಲಕ ಇಂತಹದ್ದೊಂದು ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.