ಚೆನ್ನೈ: ತಮಿಳಿನ ಖ್ಯಾತ ನಟ ಸಿಂಬು ಎಂದರೆ ಇಷ್ಟಪಡದ ಹುಡುಗಿಯರಿಲ್ಲ. ಈತನನ್ನು ಮದುವೆಯಾಗಲು ಹುಡುಗಿಯರು ತುದಿಗಾಲಲ್ಲಿ ನಿಂತಿದ್ದಾರೆ. ಇಂತಿಪ್ಪ ಸಿಂಬು ಮನೆ ಮುಂದೆ ಈಗ ಸೀರಿಯಲ್ ನಟಿಯೊಬ್ಬರು ಹೈಡ್ರಾಮಾ ಮಾಡಿದ್ದಾರೆ.
ಜೀ ತಮಿಳು ವಾಹಿನಿಯ ಯಾರಡಿ ನೀ ಮೋಹಿನಿ ಧಾರವಾಹಿ ಖ್ಯಾತಿಯ ನಟಿ ಶ್ರೀನಿಧಿ ನಿನ್ನೆ ರಾತ್ರಿ ಸಿಂಬು ಮನೆ ಮುಂದೆ ಧರಣಿ ಕೂತಿದ್ದಾರೆ. ನಾನು ಸಿಂಬುವನ್ನು ನೋಡಲೇಬೇಕು ಎಂದು ಹಠ ಹಿಡಿದಿದ್ದಾರೆ.
ಬಳಿಕ ಸಿಂಬು ಮನೆಯವರು ಆಕೆಯನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದರು. ಇದಕ್ಕೂ ಮೊದಲು ಸೋಷಿಯಲ್ ಮೀಡಿಯಾದಲ್ಲಿ ತನಗೆ ಸಿಂಬು ಎಂದರೆ ಇಷ್ಟ ಎಂದು ನಟಿ ಹೇಳಿಕೊಂಡಿದ್ದರು.