Select Your Language

Notifications

webdunia
webdunia
webdunia
webdunia

ಕಮಲ್ ಹಾಸನ್ ವಿಕ್ರಮ್ ಸಿನಿಮಾದಲ್ಲಿ ಹಿಂಸೆಯ ದೃಶ್ಯಗಳಿಗೆ ಕತ್ತರಿ

ಕಮಲ್ ಹಾಸನ್ ವಿಕ್ರಮ್ ಸಿನಿಮಾದಲ್ಲಿ ಹಿಂಸೆಯ ದೃಶ್ಯಗಳಿಗೆ ಕತ್ತರಿ
ಚೆನ್ನೈ , ಮಂಗಳವಾರ, 31 ಮೇ 2022 (17:12 IST)
ಚೆನ್ನೈ: ಕಮಲ್ ಹಾಸನ್ ನಾಯಕರಾಗಿರುವ ವಿಕ್ರಂ ಸಿನಿಮಾ ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

ಜೂನ್ 3 ರಂದು ವಿಶ್ವದಾದ್ಯಂತ ವಿಕ್ರಮ್ ತೆರೆ ಕಾಣುತ್ತಿದೆ. ಆದರೆ ಈ ಸಿನಿಮಾದಲ್ಲಿ ಅತಿಯಾಗಿ ಹಿಂಸೆ ವೈಭವೀಕರಿಸಲಾಗಿದೆ ಎಂಬ ಆಕ್ಷೇಪ ಮಾಡಿದ್ದ ಸೆನ್ಸಾರ್ ಮಂಡಳಿ ಒಟ್ಟಾರೆ 13 ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿತ್ತು.

ಅದರಂತೆ ಅಂತಹ ದೃಶ್ಯಗಳನ್ನು ತೆಗೆದು ಹಾಕಲಾಗಿದ್ದು, ಇದೀಗ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಕಮಲ್ ಹಾಸನ್ ಜೊತೆಗೆ ಫಹಾದ್ ಫಾಸಿಲ್, ವಿಜಯ್ ಸೇತುಪತಿ ಮುಂತಾದ ಘಟಾನುಘಟಿಗಳು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಕಮ್ಮ ಹಾಡಿನ ಸಕ್ಸಸ್ ಗೆ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ ಜಾಕ್ವೆಲಿನ್