Select Your Language

Notifications

webdunia
webdunia
webdunia
webdunia

ಯುಐ ಸಿನಿಮಾ ಅಲ್ಲ ‘ಸಿನಾಮ’ ಎಂದ್ರು ರಿಯಲ್ ಸ್ಟಾರ್ ಉಪೇಂದ್ರ

ಯುಐ ಸಿನಿಮಾ ಅಲ್ಲ ‘ಸಿನಾಮ’ ಎಂದ್ರು ರಿಯಲ್ ಸ್ಟಾರ್ ಉಪೇಂದ್ರ
ಬೆಂಗಳೂರು , ಭಾನುವಾರ, 5 ಜೂನ್ 2022 (08:50 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗಳೆಂದರೆ ಜನರಿಗೆ ತಲೆಯಲ್ಲಿ ಹುಳಬಿಟ್ಟಂತಾಗುವುದು ಸಹಜ. ಮೊನ್ನೆಯಷ್ಟೇ ಉಪೇಂದ್ರ ತಮ್ಮ ನಿರ್ದೇಶನದಲ್ಲಿ ಯುಐ ಎಂಬ ಸಿನಿಮಾ ಲಾಂಚ್ ಮಾಡಿದ್ದರು.

ಬಹಳ ದಿನಗಳ ನಂತರ ಉಪೇಂದ್ರ ನಿರ್ದೇಶನ ಮಾಡುತ್ತಿರುವುದರಿಂದ ಮುಹೂರ್ತ ಕಾರ್ಯಕ್ರಮಕ್ಕೆ ಅವರ ಗೆಳೆಯರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಡಾಲಿ ಧನಂಜಯ್ ಸೇರಿದಂತೆ ಅನೇಕರು ಬಂದು ಶುಭ ಹಾರೈಸಿದ್ದರು.

ಈ ಸಿನಿಮಾ ಲಾಂಚ್ ಮಾಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಉಪೇಂದ್ರ ಇದನ್ನು ಸಿನಾಮ ಎಂದಿದ್ದಾರೆ. ಈ ಸಿನಿಮಾದ ಪೋಸ್ಟರ್ ನಲ್ಲಿ ಹಣೆಗೆ ನಾಮವಿಟ್ಟುಕೊಂಡಿರುವ ರೀತಿ ಟೈಟಲ್ ಡಿಸೈನ್ ಮಾಡಲಾಗಿದೆ. ಹೀಗಾಗಿ ಸಿನಾಮ ಎಂದು ಕ್ರಿಯೇಟಿವ್ ಆಗಿ ಹೇಳಿಕೊಂಡಿದ್ದಾರೆ ಉಪೇಂದ್ರ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ದಕ್ಷಿಣದ ಸಿನಿಮಾ ಮುಂದೆ ಸೋತ ಬಾಲಿವುಡ್: ಪೃಥ್ವಿರಾಜ್ ಗೆ ವಿಕ್ರಂ ಎದುರು ಸೋಲು