Publish Date: Mon, 06 Jun 2022 (10:10 IST)
Updated Date: Mon, 06 Jun 2022 (10:11 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ಈ ಬಾರಿಯ ಬರ್ತ್ ಡೇ ಅವರ ಪಾಲಿಗೆ ವಿಶೇಷವಾಗಿದೆ.
ಕಾರಣ, ಚಾರ್ಲಿ 777 ಸಿನಿಮಾ. ಈಗಾಗಲೇ ದೆಹಲಿ, ಲಕ್ನೋ, ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಇದಕ್ಕೆ ಜನರ ಪ್ರತಿಕ್ರಿಯೆಯೂ ಅದ್ಭುತವಾಗಿದೆ.
ಜೂನ್ 10 ರಿಂದ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರ ಭರ್ಜರಿ ಹಿಟ್ ಆಗುವುದು ಖಚಿತ ಎನ್ನಲಾಗುತ್ತಿದೆ. ಇದರೊಂದಿಗೆ ಕಿರಿಕ್ ಪಾರ್ಟಿ ಬಳಿಕ ಕೊಂಚ ಮಂಕಾಗಿದ್ದ ರಕ್ಷಿತ್ ಈ ಸಿನಿಮಾ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಇದಲ್ಲದೆ ಬರ್ತ್ ಡೇ ಬಾಯ್ ರಕ್ಷಿತ್ ರಿಂದ ಅಭಿಮಾನಿಗಳು ಇನ್ನಷ್ಟು ಕ್ರಿಯೇಟಿವ್ ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದಾರೆ. ಈ ಪೈಕಿ ಉಳಿದವರು ಕಂಡಂತೆ ಪಾರ್ಟ್ 2, ಕಿರಿಕ್ ಪಾರ್ಟಿ ಪಾರ್ಟ್ 2 ಸಿನಿಮಾಗಳಿದ್ದರೆ, ಅವರದ್ದೇ ಸ್ವಂತ ನಿರ್ಮಾಣ ಸಂಸ್ಥೆಯಿಂದ ಇನ್ನಷ್ಟು ಸಿನಿಮಾ ಹೊರತರುವ ನಿರೀಕ್ಷೆಯಲ್ಲಿ ರಕ್ಷಿತ್ ಇದ್ದಾರೆ. ಹೀಗಾಗಿ ಮುಂದಿನ ಎರಡು ವರ್ಷ ರಕ್ಷಿತ್ ಬ್ಯುಸಿಯಾಗಿರಲಿದ್ದಾರೆ.