Publish Date: Mon, 06 Jun 2022 (09:30 IST)
Updated Date: Mon, 06 Jun 2022 (09:35 IST)
ಬೆಂಗಳೂರು: ಚಾರ್ಲಿ 777 ಬಿಡುಗಡೆಯ ಹೊಸ್ತಿಲಲ್ಲಿ ತಮಿಳುನಾಡಿನಲ್ಲಿ ಪ್ರಚಾರ ನಡೆಸಿ ಬಂದಿರುವ ನಟ ರಕ್ಷಿತ್ ಶೆಟ್ಟಿ ಅಲ್ಲಿ ರಶ್ಮಿಕಾ ಮಂದಣ್ಣ ಕುರಿತಾಗಿ ಕೇಳಲಾದ ಪ್ರಶ್ನೆಗೆ ಕೂಲ್ ಆಗಿಯೇ ಉತ್ತರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ರಶ್ಮಿಕಾರನ್ನು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕರೆತಂದಿದ್ದ ರಕ್ಷಿತ್ ಬಳಿಕ ಅವರೊಂದಿಗೆ ನಿಜ ಜೀವನದಲ್ಲೂ ಜೋಡಿಯಾಗಲು ಹೊರಟಿದ್ದರು. ಆದರೆ ಕಾರಣಾಂತರಗಳಿಂದ ಅವರ ಎಂಗೇಜ್ ಮೆಂಟ್ ಮುರಿದುಬಿತ್ತು.
ಹೀಗಿದ್ದರೂ ರಶ್ಮಿಕಾ ಬಗ್ಗೆ ಆಗಾಗ ರಕ್ಷಿತ್ ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಇದೀಗ ತಮಿಳು ಯೂ ಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ನೀವು ಚಿತ್ರರಂಗಕ್ಕೆ ಕರೆತಂದ ರಶ್ಮಿಕಾ ಬೆಳವಣಿಗೆ ಬಗ್ಗೆ ಏನನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ರಕ್ಷಿತ್ ರಶ್ಮಿಕಾ ಯಶಸ್ಸು ನನಗೆ ಖುಷಿಕೊಟ್ಟಿದೆ. ಆಕೆ ಕನಸು ನನಸು ಮಾಡಿಕೊಂಡ ಪರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದಿದ್ದಾರೆ.