Select Your Language

Notifications

webdunia
webdunia
webdunia
webdunia

ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪಿದ ಸ್ಯಾಂಡಲ್ ವುಡ್ ನಟರು

ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪಿದ ಸ್ಯಾಂಡಲ್ ವುಡ್ ನಟರು
ಬೆಂಗಳೂರು , ಮಂಗಳವಾರ, 9 ಜೂನ್ 2020 (09:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕಲವು ನಟರು ಕೆಲವೇ ಸಿನಿಮಾ ಮಾಡಿದರೂ ಜನ ಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದು ಬೇಗನೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಚಿರಂಜೀವ ಸರ್ಜಾ ಅಲ್ಲದೆ, ಈ ರೀತಿ ಜನರಿಗೆ ತೀರಾ ಆಘಾತ ತಂದ ಸಾವುಗಳು ಯಾವ ನಟರದ್ದೆಲ್ಲಾ ನೋಡೋಣ.


ಶಂಕರ್ ನಾಗ್ ಸಾವು
ದಿವಂಗತ ನಟ, ನಿರ್ದೇಶಕ ಶಂಕರ್ ನಾಗ್ ಅತೀ ಕಿರಿಯ ವಯಸ್ಸಿಗೆ ಅನೇಕ ಸಾಧನೆ ಮಾಡಿದ ವ್ಯಕ್ತಿ. ಅವರು ಅಪಘಾತದಲ್ಲಿ ತೀರಿಕೊಂಡಿದ್ದು ಎಲ್ಲರಿಗೂ ಆಘಾತವುಂಟು ಮಾಡಿತ್ತು. ಇಂದಿಗೂ ಶಂಕರ್ ರ ನೆನಪು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.

ಸುನಿಲ್ ಆಕ್ಸಿಡೆಂಟ್
ಕನ್ನಡ ಚಿತ್ರರಂಗಕ್ಕೆ ಒಬ್ಬ ಸ್ಪುರದ್ರೂಪಿ ನಟ ಸಿಕ್ಕಿದ ಎಂದು ಖುಷಿಪಡುತ್ತಿರುವಾಗಲೇ ಸುನಿಲ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾಗ ಈ ಅವಘಡ ಸಂಭವಿಸಿತ್ತು.

ಸಾಹಸಸಿಂಹ ವಿಷ್ಣುವರ್ಧನ್ ಸಾವು
ಸಾಹಸಸಿಂಹ ವಿಷ್ಣುವರ್ಧನ್ ಕಿರಿಯ ವಯಸ್ಸಿಗೇ ತೀರಿಕೊಳ್ಳದೇ ಇದ್ದಿದ್ದಾದರೂ ಅವರು ಸಾವನ್ನಪ್ಪುವಾಗ ಅವರಿಗೆ 59 ವರ್ಷವಾಗಿತ್ತಷ್ಟೇ. ಇನ್ನೂ ಕೆಲವು ಸಮಯ ನಮ್ಮೊಂದಿಗರಬಹುದಾಗಿತ್ತು. ಆದರೆ ದಿಡೀರ್ ಆಗಿ ಹೃದಯಾಘಾತದಿಂದ ಸಾವನ್ನಪ್ಪಿ ಎಲ್ಲರನ್ನೂ ದುಃಖದ ಕಡಲಲ್ಲಿ ತೇಲಿಸಿದ್ದರು.

ಸೌಂದರ್ಯ ವಿಮಾನಾಪಘಾತ
ಸ್ನಿಗ್ಧ ಸೌಂದರ್ಯದ ಬಹುಭಾಷೆಯಲ್ಲಿ ಮಿಂಚಿದ್ದ ನಟಿ ಸೌಂದರ್ಯ ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದಾಗ ಯಾರಿಗೂ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರಿಗೆ ಆಗ ಕೇವಲ 32 ವರ್ಷವಾಗಿತ್ತಷ್ಟೇ.

ಉದಯ್-ಅನಿಲ್ ಸಾವು
ಇತ್ತೀಚೆಗೆ ನಡೆದ ದುರಂತ ಸಾವಿನ ಪೈಕಿ ಖಳನಟರಾದ ಉದಯ್ ಮತ್ತು ಅನಿಲ್ ಸಾವು ಕೂಡಾ ಮರೆಯಲಾಗದಂತದ್ದು. ಆಗಷ್ಟೇ ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದ ಈ ನಟರು ಮುಂದೊಂದು ಖಳ ನಟರಾಗಿ ಮಿಂಚುವ ಎಲ್ಲಾ ಸಾಧ‍್ಯತೆಯಿತ್ತು. ಆದರೆ ಮಾಸ್ತಿ ಗುಡಿ ಶೂಟಿಂಗ್ ವೇಳೆ ಹೆಲಿಕಾಪ್ಟರ್ ನಿಂದ ನೀರಿಗೆ ಹಾರುವ ಸನ್ನಿವೇಶದಲ್ಲಿ ಸುರಕ್ಷಿತಾ ಕ್ರಮಗಳ ಕೊರತೆಯಿಂದಾಗಿ ಪ್ರಾಣ ತೆತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಬಿಂಗ್ ಗೆ ನಲುಗಿದ ಕಿರುತೆರೆ: ಕನ್ನಡ ಕಲಾವಿದರಿಗೆ ಸಂಕಷ್ಟ