Select Your Language

Notifications

webdunia
webdunia
webdunia
webdunia

ಡಬ್ಬಿಂಗ್ ಗೆ ನಲುಗಿದ ಕಿರುತೆರೆ: ಕನ್ನಡ ಕಲಾವಿದರಿಗೆ ಸಂಕಷ್ಟ

ಡಬ್ಬಿಂಗ್ ಗೆ ನಲುಗಿದ ಕಿರುತೆರೆ: ಕನ್ನಡ ಕಲಾವಿದರಿಗೆ ಸಂಕಷ್ಟ
ಬೆಂಗಳೂರು , ಮಂಗಳವಾರ, 9 ಜೂನ್ 2020 (09:26 IST)
ಬೆಂಗಳೂರು: ಹಿಂದೊಮ್ಮೆ ಕನ್ನಡ ಸಿನಿಮಾರಂಗಕ್ಕೆ ಡಬ್ಬಿಂಗ್ ಭೂತ ಬರುತ್ತದೆ ಎಂದಾಗ ಸಿನಿ ರಂಗದ ಕಲಾವಿದರೆಲ್ಲಾ ಒಟ್ಟು ಸೇರಿ ಪ್ರತಿಭಟನೆ ಮಾಡಿದ್ದರು. ಅದಾದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾ ಹೆಸರಿನಲ್ಲಿ ಹಲವು ಸಿನಿಮಾಗಳು ಕನ್ನಡಕ್ಕೆ, ಕನ್ನಡದಿಂದ ಬೇರೆ ಭಾಷೆಗೆ ಡಬ್ ಆದವು.


ಈಗ ಕಿರುತೆರೆಗೂ ಡಬ್ಬಿಂಗ್ ಭೂತ ಆವರಿಸಿದೆ. ಲಾಕ್ ಡೌನ್ ವೇಳೆ ಕನ್ನಡ ಧಾರವಾಹಿಗಳ ಹೊಸ ಎಪಿಸೋಡ್ ಇಲ್ಲ ಎಂಬ ಕಾರಣಕ್ಕೆ ಕನ್ನಡ ವಾಹಿನಿಗಳು ಡಬ್ಬಿಂಗ್ ಧಾರವಾಹಿಗಳು, ಸಿನಿಮಾಗಳನ್ನು ಪ್ರಸಾರ ಮಾಡಿ ಟಿಆರ್ ಪಿ ಪಡೆದಿದ್ದೇ ನೆಪವಾಗಿದೆ.

ಈಗ ಕನ್ನಡದ ಜನಪ್ರಿಯ ಧಾರವಾಹಿಗಳನ್ನೇ ಪ್ರಸಾರ ನಿಲ್ಲಿಸಿ ಬಹುತೇಕ ಡಬ್ಬಿಂಗ್ ಧಾರವಾಹಿಗಳಿಗೆ ಜಾಗ ಮಾಡಿಕೊಡಲಾಗುತ್ತಿದೆ. ಇದು ಸ್ಥಳೀಯ ಕಲಾವಿದರ ಅನ್ನ ಕಿತ್ತುಕೊಂಡಂತೆ. ಈ ಬಗ್ಗೆ ಹಲವು ಕಲಾವಿದರು ತಮ್ಮೊಳಗೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸಂಘಟಿತ ಹೋರಾಟವಿಲ್ಲದೇ ಅನ್ಯಾಯ ಸರಿಹೋಗದು. ಕನ್ನಡ ಟಿವಿ ಮಾರುಕಟ್ಟೆಗೆ ಇದು ಅಪಾಯಕಾರಿ ಬೆಳವಣಿಗೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೃಂದಾವನ ಫಾರಂ ಹೌಸ್ ನಲ್ಲಿ ಮಣ್ಣಲ್ಲಿ ಮಣ್ಣಾದ ಚಿರು ಸರ್ಜಾ