Publish Date: Sun, 07 Jun 2020 (10:00 IST)
Updated Date: Sun, 07 Jun 2020 (10:01 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಉದಯ ವಾಹಿನಿಯ ಧಾರವಾಹಿಗಳು ನಾಳೆಯಿಂದ ರಿ ಓಪನ್ ಆಗುತ್ತಿದೆ. ನಾಳೆಯಿಂದ ಹೊಸ ಎಪಿಸೋಡ್ ಆರಂಭವಾಗಲಿದ್ದು, ತಮ್ಮ ಧಾರವಾಹಿಗಳ ಪ್ರಚಾರಕ್ಕೆ ವಾಹಿನಿ ಸಿನಿಮಾ ಸ್ಟಾರ್ ಗಳನ್ನು ಕರೆಸಿಕೊಂಡಿದೆ.
ನಟಿ ಪ್ರಿಯಾಂಕ ಉಪೇಂದ್ರ ಉದಯ ವಾಹಿನಿಯ ‘ಸೇವಂತಿ’ ಧಾರವಾಹಿಯಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರದಿಂದ ಶುಕ್ರವಾರವದರೆಗೆ ರಾತ್ರಿ 7.30 ಕ್ಕೆ ಪ್ರಸಾರವಾಗಲಿರುವ ಸೇವಂತಿ ಧಾರವಾಹಿಯ ಹೊಸ ಎಪಿಸೋಡ್ ನಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದಾರೆ.
ಈ ಹಿಂದೆಯೂ ಅವರು ಧಾರವಾಹಿ ಪ್ರಚಾರಕ್ಕೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಈಗ ಮತ್ತೊಮ್ಮೆ ಕಿರುತೆರೆಯಲ್ಲಿ ದರ್ಶನ ಕೊಡಲಿದ್ದಾರೆ.