Publish Date: Mon, 08 Jun 2020 (16:48 IST)
Updated Date: Mon, 08 Jun 2020 (16:54 IST)
ಬೆಂಗಳೂರು: ನಿನ್ನೆ ಅಕಾಲಿಕವಾಗಿ ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅಂತಿಮ ಕ್ರಿಯೆ ಧ್ರುವ ಸರ್ಜಾ ಅವರಿಗೆ ಸೇರಿದ ಬೆಂಗಳೂರಿನ ನೆಲಗುಳಿ ಗ್ರಾಮದ ‘ಬೃಂದಾವನ’ ಫಾರಂ ಹೌಸ್ ನಲ್ಲಿ ವಿಧಿ ವಿಧಾನ ಪ್ರಕಾರ ನೆರವೇರಿದೆ.
ಬಸವನಗುಡಿಯ ನಿವಾಸದಿಂದ ಹೊರಟ ಅವರ ಪಾರ್ಥಿವ ಶರೀರ ನೆಲಗುಳಿಯಲ್ಲಿರುವ ಫಾರಂ ಹೌಸ್ ತಲುಪಿತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ಅವರಿಗೆ ಅಂತಿಮ ವಿದಾಯ ಹೇಳಿದರು.
ಬಳಿಕ ಫಾರಂ ಹೌಸ್ ನಲ್ಲಿ ಗೌಡರ ಸಂಪ್ರದಾಯದಂತೆ ವೈದಿಕ ವಿಧಿ ವಿಧಾನಗಳನ್ನು ಅವರ ತಂದೆ ನೆರವೇರಿಸಿದರು. ಈ ವೇಳೆ ಪತ್ನಿ ಮೇಘನಾ ದುಃಖ ತಡೆಯಲಾಗದೇ ಬಿಕ್ಕಿ ಬಿಕ್ಕಿ ಅಳುತ್ತಾ ಪತಿಯ ಮೃತದೇಹವನ್ನು ತಬ್ಬಿಕೊಂಡು ಅತ್ತ ದೃಶ್ಯ ಮನಕಲಕುವಂತಿತ್ತು. ಬಳಿಕ ಸಂಪ್ರದಾಯ ಪ್ರಕಾರ ಚಿರು ದೇಹವನ್ನು ಮಣ್ಣಲ್ಲಿಡಲಾಯಿತು. ಅಲ್ಲಿಗೆ ಚಿರು ಸರ್ಜಾ ಎಂಬ ಯುವ ಸಾಮ್ರಾಟನ ಬದುಕು ಕಿರು ಅವಧಿಯಲ್ಲೇ ಮುಕ್ತಾಯವಾಯಿತು.