Publish Date: Mon, 08 Jun 2020 (11:11 IST)
Updated Date: Mon, 08 Jun 2020 (11:18 IST)
ಬೆಂಗಳೂರು: ಪತಿಯ ಅಕಾಲಿಕ ನಿಧನ ಮೇಘನಾ ಸರ್ಜಾರನ್ನು ಇನ್ನಿಲ್ಲದ ಆಘಾತಕ್ಕೆ ಸಿಲುಕಿಸಿದೆ. ಚಿರು ಸರ್ಜಾ ಮೃತದೇಹದ ಮುಂದೆ ನಿಂತು ಭಾವುಕರಾಗಿ ಮಾತನಾಡುತ್ತಾ ಬಿಕ್ಕಿ ಬಿಕ್ಕಿ ಅತ್ತ ಮೇಘನಾ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅವರನ್ನು ಪಕ್ಕದಲ್ಲಿದ್ದ ತಾಯಿ ಪ್ರಮೀಳಾ, ಧ್ರುವ ಸರ್ಜಾ ಸಮಾಧಾನಿಸಿ ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಈ ದೃಶ್ಯವನ್ನು ನೋಡುತ್ತಿದ್ದ ನೆರೆದಿದ್ದವರಿಗೂ ಕಣ್ಣಂಚಿನಲ್ಲಿ ನೀರೂರಿತ್ತು. ಧ್ರುವ ಸರ್ಜಾ ಈ ವೇಳೆ ತಮ್ಮ ನೆಚ್ಚಿನ ಅತ್ತಿಗೆಯನ್ನು ತಬ್ಬಿ ಹಿಡಿದು ನಿಮ್ಮ ಜತೆಗೆ ನಾನಿದ್ದೇನೆ ಎಂದು ಸಮಾಧಾನಿಸುವ ದೃಶ್ಯ ಮನಕಲಕುವಂತಿತ್ತು.