Select Your Language

Notifications

webdunia
webdunia
webdunia
webdunia

ಚಿರು ಸರ್ಜಾ ಸಾವಿಗೆ ಇದುವೇ ಕಾರಣವಾಯಿತೇ?

ಚಿರು ಸರ್ಜಾ ಸಾವಿಗೆ ಇದುವೇ ಕಾರಣವಾಯಿತೇ?
ಬೆಂಗಳೂರು , ಸೋಮವಾರ, 8 ಜೂನ್ 2020 (08:30 IST)
ಬೆಂಗಳೂರು: ಚಿರಂಜೀವಿ ಸರ್ಜಾ ಅಕಾಲಿಕವಾಗಿ ಸಾವನ್ನಪ್ಪಲು ಜಾತಕ ದೋಷವೇ ಕಾರಣವಾಯಿತೇ? ನವರಸನಾಯಕ ಜಗ್ಗೇಶ್ ಅವರ ಜಾತಕದಲ್ಲಿದ್ದ ದೋಷದ ಬಗ್ಗೆ ಹೇಳಿದ್ದಾರೆ.


ಚಿರು ಸರ್ಜಾ ಮದುವೆ ಸಂದರ್ಭದಲ್ಲಿ ಮೇಘನಾ ಮತ್ತು ಚಿರು ಜಾತಕವನ್ನು ತಮ್ಮ ಪರಿಚಯದ ಜ್ಯೋತಿಷಿಗಳ ಬಳಿ ತೋರಿಸಲು ಸುಂದರ್ ರಾಜ್ ದಂಪತಿಗಳ ಜತೆ ಜಗ್ಗೇಶ್ ಹೋಗಿದ್ದರಂತೆ. ಆ ಜ್ಯೋತಿಷಿಗಳು ಇವರ ಜಾತಕದಲ್ಲಿ ಅಷ್ಟಮ ಕುಜ ದೋಷವಿದೆ. ಅದಕ್ಕೆ ಕೆಲವು ಪೂಜೆ ಮುಖ್ಯ. ಅದನ್ನು ಮಾಡಿ ಮುಂದುವರಿಯಿರಿ ಎಂದಿದ್ದರಂತೆ.

ಆದರೆ ಈ ಪೂಜೆ ಅವರು ಮಾಡಿದ್ದಾರೋ ಇಲ್ಲವೋ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದಿದ್ದಾರೆ ಜಗ್ಗೇಶ್. ಜ್ಯೋತಿಷ್ಯದಲ್ಲಿ ನಂಬಿಕೆಯುಳ್ಳವರು ಕುಜ ದೋಷವಿದ್ದರೆ ಪತಿ-ಪತ್ನಿ ಜತೆಯಾಗಿ ಬಾಳುವ ಯೋಗವಿಲ್ಲ ಎಂದು ನಂಬುತ್ತಾರೆ. ಹೀಗಾಗಿ ಈ ದೋಷವೇ ಚಿರು ಸಾವಿಗೆ ಕಾರಣವಾಯಿತೇ ಎಂದು ಅನುಮಾನ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ