Select Your Language

Notifications

webdunia
webdunia
webdunia
webdunia

ಚಿರು ಸರ್ಜಾಗೆ ತನ್ನ ಮಗುವಿನ ಮುಖ ನೋಡುವ ಭಾಗ್ಯವೂ ಇಲ್ಲದೇ ಹೋಯ್ತು!

ಚಿರು ಸರ್ಜಾಗೆ ತನ್ನ ಮಗುವಿನ ಮುಖ ನೋಡುವ ಭಾಗ್ಯವೂ ಇಲ್ಲದೇ ಹೋಯ್ತು!
ಬೆಂಗಳೂರು , ಸೋಮವಾರ, 8 ಜೂನ್ 2020 (08:23 IST)
ಬೆಂಗಳೂರು: ವಿಧಿ ಎಷ್ಟು ಕ್ರೂರ ಎಂಬುದಕ್ಕೆ ಇದುವೇ ಸಾಕ್ಷಿ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ತನ್ನ ಮಗುವಿನ ಮುಖ ನೋಡುವ ಮೊದಲೇ ಚಿರು ಇಹಲೋಕದ ಯಾತ್ರೆ ಮುಗಿಸಿದ್ದಾರೆ.


ಮೇಘನಾ ಮತ್ತು ಚಿರು 2018 ರ ಮೇ 4 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ದಾಂಪತ್ಯ ಜೀವನಕ್ಕೆ ಈಗಷ್ಟೇ ಎರಡು ವರ್ಷ ತುಂಬಿತ್ತು. ಮೇಘನಾ ಈಗ ನಾಲ್ಕು ತಿಂಗಳ ಗರ್ಭಿಣಿ. ಈ ಖುಷಿಯಲ್ಲಿದ್ದ ಈ ಕುಟುಂಬಕ್ಕೆ ಈಗ ಚಿರು ಸಾವು ಬರಸಿಡಿಲಿನಂತಾಗಿದೆ.

ಪತಿಯ ಮೃತದೇಹದ ಮುಂದೆ ಕೂತು ಮೇಘನಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲರಿಗೂ ಬೇಸರ ತರಿಸುತ್ತಿತ್ತು. ಇನ್ನು ಆರು ತಿಂಗಳು ಕಳೆದಿದ್ದರೆ ಪುಟಾಣಿ ಚಿರು ಬರುತ್ತಿದ್ದ ಎಂದು ನಟಿ ತಾರಾ ಕೂಡಾ ಹೇಳಿ ಬೇಸರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧ್ರುವ ಸರ್ಜಾ ಫಾರಂ ಹೌಸ್ ನಲ್ಲಿ ಚಿರು ಸರ್ಜಾ ಅಂತ್ಯಕ್ರಿಯೆಗೆ ಸಿದ್ಧತೆ