Publish Date: Mon, 08 Jun 2020 (08:12 IST)
Updated Date: Mon, 08 Jun 2020 (08:15 IST)
ಬೆಂಗಳೂರು: ನಿನ್ನೆಯಷ್ಟೇ ಅಕಾಲಿಕವಾಗಿ ನಿಧನರಾದ ನಟ ಚಿರಂಜೀವಿ ಸರ್ಜಾ ಅಂತಿಮ ಕ್ರಿಯೆ ಸಹೋದರ ಧ್ರುವ ಸರ್ಜಾ ಅವರ ಫಾರಂ ಹೌಸ್ ನಲ್ಲಿ ನಡೆಯಲಿದೆ.
ಬೆಂಗಳೂರಿನ ನೆಲಗುಳಿ ಗ್ರಾಮದಲ್ಲಿರುವ ಫಾರಂ ಹೌಸ್ ನಲ್ಲಿ ಅಂತ್ಯ ಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂಬುದು ಧ್ರುವ ಸರ್ಜಾ ಹಠ ಹಿಡಿದ ಕಾರಣ ಕುಟುಂಬಸ್ಥರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಬಸವನಗುಡಿಯ ನಿವಾಸದಲ್ಲಿರುವ ಚಿರು ಮೃತದೇಹವನ್ನು ಕೆಲವು ಸಮಯದ ನಂತರ ಫಾರಂ ಹೌಸ್ ಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಂತಿಮ ಯಾತ್ರೆಗೆ ವಾಹನ ಸಿದ್ಧವಾಗಿದೆ. 11.30 ರ ಬಳಿಕ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.