Publish Date: Sat, 06 Jun 2020 (09:44 IST)
Updated Date: Sat, 06 Jun 2020 (09:47 IST)
ಬೆಂಗಳೂರು: ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುಪಡಿಸಿದ ಕೊರೋನಾ ಕುರಿತ ಜಾಗೃತಿ ಮೂಡಿಸುವ ‘ಬದಲಾಗು ನೀನು’ ಹಾಡು ನಿನ್ನೆ ಲಾಂಚ್ ಆಗಿದೆ. ಆದರೆ ಲಾಂಚ್ ಆದ ಬಗ್ಗೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಕಾಮೆಂಟ್ ಸೆಕ್ಷನ್ ನ್ನೇ ಟರ್ನ್ ಆಫ್ ಮಾಡಿದ್ದಾರೆ!
ಇದಕ್ಕೆ ಕಾರಣ ಕಿಚ್ಚ ಸುದೀಪ್ ಅಭಿಮಾನಿಗಳು. ಈ ಆಲ್ಬಂ ಹಾಡಿನಲ್ಲಿ ಕಿಚ್ಚ ಸುದೀಪ್ ಬಿಟ್ಟು ಕನ್ನಡದ ಎಲ್ಲಾ ಘಟಾನುಘಟಿ ನಟರೂ ಇದ್ದಾರೆ. ಆದರೆ ಸುದೀಪ್ ರನ್ನು ಪರಿಗಣಿಸದೇ ಇದ್ದಿದ್ದಕ್ಕೆ ಈ ಮೊದಲೇ ಕಿಚ್ಚ ಅಭಿಮಾನಿಗಳು ಪವನ್ ಒಡೆಯರ್ ಮತ್ತು ತಂಡದ ವಿರುದ್ಧ ಕಿಡಿ ಕಾರಿದ್ದರು. ಇದು ಡಿ ಬೀಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿರುವ ಕಾರಣ, ಡಿ ಬಾಸ್ ದರ್ಶನ್ ಕಾರಣಕ್ಕೆ ಸುದೀಪ್ ರನ್ನು ಕೈ ಬಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಪವನ್ ಒಡೆಯರ್ ಆಲ್ಬಂ ಹಾಡು ಬಿಡುಗಡೆಯಾದ ಬಗ್ಗೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಕಿಚ್ಚನ ಅಭಿಮಾನಿಗಳು ಸಾಲು ಸಾಲಾಗಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪವನ್ ಒಡೆಯರ್ ಕಾಮೆಂಟ್ ಸೆಕ್ಷನ್ ಬ್ಲಾಕ್ ಮಾಡಿದ್ದಾರೆ.
ಇನ್ನು ಹಾಡಿನ ವಿಚಾರಕ್ಕೆ ಬಂದರೆ ರಾಜೇಶ‍್ ಕೃಷ್ಣನ್, ವಿಜಯ್ ಪ್ರಕಾಶ್, ಸಂತೋಷ್ ವೆಂಕಿ ಧ್ವನಿಗೂಡಿಸಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದ್ದು, ಎಲ್ಲಾ ಸ್ಟಾರ್ ಗಳು ತಮ್ಮ ಪಾಲಿನ ನಿಜವಾದ ಹೀರೋ ಆರೋಗ್ಯ ಕಾರ್ಯಕರ್ತರು, ಕೊರೋನಾ ಕಾರ್ಯಕರ್ತರು ಎಂದಿದ್ದಾರೆ.