Select Your Language

Notifications

webdunia
webdunia
webdunia
webdunia

ಆಪ್ತನ ಹುಟ್ಟುಹಬ್ಬಕ್ಕೆ ಪಿಯಾನೋ ನುಡಿಸಿ ಶುಭ ಕೋರಿದ ಕಿಚ್ಚ ಸುದೀಪ್

ಆಪ್ತನ ಹುಟ್ಟುಹಬ್ಬಕ್ಕೆ ಪಿಯಾನೋ ನುಡಿಸಿ ಶುಭ ಕೋರಿದ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 1 ಜೂನ್ 2020 (10:44 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಆಪ್ತರ ಬಗ್ಗೆ ಎಷ್ಟು ಅಕ್ಕರೆ ತೋರುತ್ತಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಂತಹದ್ದರಲ್ಲಿ ಸದಾ ತಮ್ಮ ಜತೆಗಿರುವ ಆಪ್ತನ ಬರ್ತ್ ಡೇ ಎಂದರೆ ಕೇಳಬೇಕೇ?

 
ಕಿಚ್ಚ ತಮ್ಮ ಆಪ್ತ ಮಹದೇವ್ ಎಂಬವರ ಹುಟ್ಟುಹಬ್ಬಕ್ಕೆ ತಾವೇ ಪಿಯಾನೋ ನುಡಿಸಿ ಬರ್ತ್ ಡೇ ಸಾಂಗ್ ಪ್ಲೇ ಮಾಡಿದ್ದು, ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಜತೆಗೆ ಈ ಬರ್ತ್ ಡೇ ಹಾಡನ್ನು ಇಂದು ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಅರ್ಪಣೆ ಮಾಡಿದ್ದಾರೆ. ಕಿಚ್ಚ ಗಿಟಾರ್ ನುಡಿಸುತ್ತಾರೆ, ಚೆನ್ನಾಗಿ ಹಾಡುತ್ತಾರೆ ಎಂದು ಎಲ್ಲರಿಗೂ ಗೊತ್ತು. ಇದೀಗ ಪಿಯಾನೋ ನುಡಿಸುವುದರಲ್ಲೂ ಎತ್ತಿದ ಕೈ ಎಂದು ತೋರಿಸಿಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾಗೆ ಬಲಿಯಾದ ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್