Select Your Language

Notifications

webdunia
webdunia
webdunia
webdunia

‘ಮೇಕಪ್’ ಸಿನಿಮಾ ಸಾಲ ತೀರಿಸಲು ಮನೆ ಮಾರಿದ್ದ ಜಗ್ಗೇಶ್!

‘ಮೇಕಪ್’ ಸಿನಿಮಾ ಸಾಲ ತೀರಿಸಲು ಮನೆ ಮಾರಿದ್ದ ಜಗ್ಗೇಶ್!
ಬೆಂಗಳೂರು , ಸೋಮವಾರ, 1 ಜೂನ್ 2020 (09:24 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ತಮ್ಮ ಸ್ವಂತ ನಿರ್ಮಾಣದಲ್ಲಿ ಮಾಡಿದ ಸಿನಿಮಾ ‘ಮೇಕಪ್’. ಈ ಸಿನಿಮಾ 2002 ರಲ್ಲಿ ತೆರೆ ಕಂಡಿತ್ತು. ಜಗ್ಗೇಶ್ ಕಂಪ್ಲೀಟ್ ಮೇಕ್ ಓವರ್ ಸಿನಿಮಾದಲ್ಲಿ ಗಮನ ಸೆಳೆದಿತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಮಕಾಡೆ ಮಲಗಿತ್ತು.


ಆ ಸಿನಿಮಾ ನಿರ್ಮಾಣ ಮಾಡಿದ್ದ ಜಗ್ಗೇಶ್ 75 ಲಕ್ಷ ರೂ. ಕಳೆದುಕೊಂಡಿದ್ದರಂತೆ. ಆಗ ಮಾಡಿದ್ದ ಸಾಲ ತೀರಿಸಲು ಜಗ್ಗೇಶ್ ತಮ್ಮ ಸ್ವಂತ ಮನೆಯನ್ನೇ ಮಾರಬೇಕಾಯಿತಂತೆ. ಅಂದು ಆ ಮನೆಯನ್ನು ತಮ್ಮ ಸ್ನೇಹಿತನಿಗೇ ಮಾರಿದ್ದರು ಜಗ್ಗೇಶ್.

ಆವತ್ತು ಮಾರಿದ್ದ ಆ ಮನೆಯ ಆಸ್ತಿ ಇಂದು 35 ಕೋಟಿ ರೂ.! ಅದನ್ನು ಆವತ್ತು ಕೊಂಡಿದ್ದ ಸ್ನೇಹಿತನಿಗೆ ಇಂದು 16 ಲಕ್ಷ ರೂ. ಬಾಡಿಗೆ ಬರುತ್ತಿದೆಯಂತೆ! ಆವತ್ತು ಸ್ವಂತ ಬಂಡವಾಳ ಹಾಕಿ ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದ ವ್ಯಥೆಯ ಕತೆಯ ಬಗ್ಗೆ ಜಗ್ಗೇಶ್ ಸ್ಮರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಶುರು ಟಿವಿ ಲೋಕದ ಕಲರವ