Select Your Language

Notifications

webdunia
webdunia
webdunia
webdunia

ಇಂದಿನಿಂದ ಶುರು ಟಿವಿ ಲೋಕದ ಕಲರವ

ಇಂದಿನಿಂದ ಶುರು ಟಿವಿ ಲೋಕದ ಕಲರವ
ಬೆಂಗಳೂರು , ಸೋಮವಾರ, 1 ಜೂನ್ 2020 (09:04 IST)
ಬೆಂಗಳೂರು: ಇಷ್ಟು ದಿನ ತಮ್ಮ ಮೆಚ್ಚಿನ ಧಾರವಾಹಿ, ಶೋ ಇಲ್ಲದೇ ಬೇಸರದಲ್ಲಿದ್ದ ವೀಕ್ಷಕರಿಗೆ ಇಂದಿನಿಂದ ಗುಡ್ ನ್ಯೂಸ್. ಮತ್ತೆ ತಮ್ಮ ದೈನಂದಿನ ಶೋ ನೋಡುವ ಭಾಗ್ಯ.


ಇಂದಿನಿಂದ ಕನ್ನಡ ಕಿರುತೆರೆ ಮತ್ತೆ ಚಟುವಟಿಕೆಗೆ ಮರಳಲಿದ್ದು, ಧಾರವಾಹಿಗಳ ಹೊಸ ಕಂತುಗಳ ಪ್ರಸಾರ ಆರಂಭವಾಗಲಿದೆ. ಕಳೆದ ಸೋಮವಾರದಿಂದ ಸುರಕ್ಷಿತ ಕ್ರಮಗಳೊಂದಿಗೆ ಚಿತ್ರೀಕರಣ ಆರಂಭಿಸಿದ್ದ ಕಿರುತೆರೆ ಧಾರವಾಹಿಗಳು ಇಂದಿನಿಂದ ಹೊಸ ಎಪಿಸೋಡ್ ಗಳ ರಸದೌತಣ ನೀಡಲಿದೆ.

ಈಗಾಗಲೇ ಹಳೆಯ ಎಪಿಸೋಡ್ ಗಳನ್ನು ನೋಡಿ ಬೇಸತ್ತಿದ್ದ ವೀಕ್ಷಕರು ಇಂದಿನಿಂದ ಪ್ರಸಾರವಾಗಲಿರುವ ಹೊಸ ಕಂತುಗಳ ಪ್ರಸಾರಕ್ಕೆ ಕುತೂಹಲದಿಂದ ಎದುರು ನೋಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶದಲ್ಲಿರುವ ಅಭಿಮಾನಿಗಳಿಗೆ ಈಗ ಸ್ಯಾಂಡಲ್ ವುಡ್ ಅಭಯ