ಕೋಟಿಗೊಬ್ಬ 3 ಬಿಡುಗಡೆ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?

ಗುರುವಾರ, 28 ಮೇ 2020 (10:19 IST)
ಬೆಂಗಳೂರು: ಇನ್ನೇನು ಲಾಕ್ ಡೌನ್ 4 ಕೂಡಾ ಮುಗಿಯುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಥಿಯೇಟರ್ ತೆರೆಯಲೂ ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಬಹುದು ಎಂಬ ಸುದ್ದಿ ಕೇಳಿಬರುತ್ತಿದೆ.


ಹೀಗಾಗಿ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಸಿನಿಮಾ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅಭಿಮಾನಿಯೊಬ್ಬ ಕಿಚ್ಚ ಸುದೀಪ್ ಗೆ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಥಿಯೇಟರ್ ಓಪನ್ ಆಗುತ್ತದೆ ಎಂಬ ಸುದ್ದಿಯಿದೆ. ಹಾಗಿದ್ದರೆ ನೀವು ಕೋಟಿಗೊಬ್ಬ 3 ಯಾವಾಗ ರಿಲೀಸ್ ಮಾಡುತ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಕಿಚ್ಚ ಉತ್ತರ ಕೊಟ್ಟಿದ್ದಾರೆ.

‘ಥಿಯೇಟರ್ ಓಪನ್ ಮಾಡುವ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ. ಬಂದ ಕೂಡಲೇ ಬಿಡುಗಡೆಗೆ ಸಿದ್ಧವಾಗಲಿದೆ’ ಎಂದು ಕಿಚ್ಚ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಧಿಕಾ ಪಂಡಿತ್ ಫೇವರಿಟ್ ಹುಡುಗರು ಇವರೇ ಅಂತೆ!