ರಾಧಿಕಾ ಪಂಡಿತ್ ಫೇವರಿಟ್ ಹುಡುಗರು ಇವರೇ ಅಂತೆ!

ಗುರುವಾರ, 28 ಮೇ 2020 (10:06 IST)
ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋವೊಂದನ್ನು ಪ್ರಕಟಿಸಿದ್ದು, ಇವರೇ ನನ್ನ ಫೇವರಿಟ್ ಬಾಯ್ಸ್ ಎಂದು ಬರೆದುಕೊಂಡಿದ್ದಾರೆ.


ರಾಧಿಕಾ ತಮ್ಮ ಪತಿ, ರಾಕಿಂಗ್ ಸ್ಟಾರ್ ಯಶ್ ಮತ್ತು ಪುತ್ರನ ಖುಷಿಯ ಕ್ಷಣವೊಂದರ ಫೋಟೋವೊಂದನ್ನು ಪ್ರಕಟಿಸಿದ್ದು, ಇವರು ನನ್ನ ಫೇವರಿಟ್ ಬಾಯ್ಸ್ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಯಶ್ ಸಿಕ್ಸ್ ಪ್ಯಾಕ್ ದರ್ಶನ ಮಾಡಿದ್ದರೆ, ಅವರ ಪುತ್ರನೂ ಬಾಯ್ತುಂಬಾ ನಗುತ್ತಿದ್ದಾನೆ.


ಈ ಕ್ಯೂಟ್ ಫೋಟೋ ನೋಡಿ ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಲೈಕ್ಸ್, ಕಾಮೆಂಟ್ ಮಾಡಿದ್ದಾರೆ.  ಇತ್ತೀಚೆಗಷ್ಟೇ ರಾಧಿಕಾ-ಯಶ್ ಜೋಡಿ ತಮ್ಮ ಪುತ್ರನ ಫೋಟೋವನ್ನು ರಿವೀಲ್ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೈಕಾಲಜಿಸ್ಟ್ ಆಗಲಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್