Select Your Language

Notifications

webdunia
webdunia
webdunia
webdunia

ಪತ್ನಿ ಜತೆಗಿನ ರೊಮ್ಯಾಂಟಿಕ್ ಕ್ಷಣ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಪತ್ನಿ ಜತೆಗಿನ ರೊಮ್ಯಾಂಟಿಕ್ ಕ್ಷಣ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು , ಗುರುವಾರ, 28 ಮೇ 2020 (09:52 IST)
ಬೆಂಗಳೂರು: ಇತ್ತೀಚೆಗಷ್ಟೇ ಮದುವೆಯಾದ ನವಜೋಡಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಹೊಸ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಲಾಕ್ ಡೌನ್ ಅವಧಿಯಲ್ಲಿ ನಿಖಿಲ್ ತಮ್ಮ ಬಿಡದಿಯ ತೋಟದ ಮನೆಯಲ್ಲಿ ಪತ್ನಿ ಜತೆಗೆ ಸುತ್ತಾಡುತ್ತಿರುವ ರೊಮ್ಯಾಂಟಿಕ್ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಇಬ್ಬರೂ ಕೈ ಕೈ ಹಿಡಿದುಕೊಂಡು ಸಾಂಪ್ರದಾಯಿಕ ಉಡುಗೆಯಲ್ಲಿ ರೊಮ್ಯಾಂಟಿಕ್ ಆಗಿರುವ ಕ್ಷಣಗಳ ಫೋಟೋ ನೋಡಿ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಲೈಕ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಲಾಕ್ ಡೌನ್ ನಡುವೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಇದೇ ಕಾರಣಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದೇ ಕಡಿಮೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್-ಯಶ್ ಫ್ಯಾನ್ಸ್ ಕಿತ್ತಾಟದ ಬಳಿಕ ಪವನ್ ಒಡೆಯರ್ ಟ್ವೀಟ್