Publish Date: Tue, 26 May 2020 (09:29 IST)
Updated Date: Tue, 26 May 2020 (09:31 IST)
ಬೆಂಗಳೂರು: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಒಂದೇ ಹಾಡಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಕೊರೋನಾ ಕುರಿತ ಜಾಗೃತಿ ಮೂಡಿಸುವ ಹಾಡಿನ ಬಿಡುಗಡೆ ನಿನ್ನೆಯೇ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಕೊನೆಯ ಕ್ಷಣಗಳಲ್ಲಿ ಮುಂದೂಡಿಕೆಯಾಗಿದೆ.
ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುಪಡಿಸಿದ ಕೊರೋನಾ ಕುರಿತ ‘ಬದಲಾಗು ನೀನು’ ಎಂಬ ಹಾಡು ನಿನ್ನೆ ಸಂಜೆ 5 ಗಂಟೆಗೆ ಯೂ ಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗುವುದೆಂದು ನಿಗದಿಯಾಗಿತ್ತು. ಅದರಂತೆ ಎಲ್ಲಾ ಸೆಲೆಬ್ರಿಟಿಗಳನ್ನು ಒಟ್ಟಿಗೇ ನೋಡಲು ಅಭಿಮಾನಿಗಳೂ ಕಾತುರದಿಂದ ಕಾಯುತ್ತಿದ್ದರು.
ಆದರೆ ಕೊನೆಯ ಕ್ಷಣದಲ್ಲಿ ಸಚಿವ ಡಾ. ಕೆ ಸುಧಾಕರ್ ಸಲಹೆಯಂತೆ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಡಿ ಬೀಟ್ಸ್ ಟ್ವೀಟ್ ಮಾಡಿದೆ. ಮುಂದಿನ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸುವುದಾಗಿ ಪ್ರಕಟಿಸಿದೆ. ಆದರೆ ಹಾಡಿಗಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳು ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.