ಒಂದೇ ಹಾಡಿನಲ್ಲಿ ಕನ್ನಡದ ಬಹುತೇಕ ಸೆಲೆಬ್ರಿಟಿಗಳು!

ಸೋಮವಾರ, 25 ಮೇ 2020 (09:29 IST)
ಬೆಂಗಳೂರು: ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಂದು ಹೊಸ ಹಾಡೊಂದು ಬಿಡುಗಡೆಯಾಗಲಿದ್ದು, ಕನ್ನಡದ ಬಹುತೇಕ ಸೆಲೆಬ್ರಿಟಿಗಳನ್ನು ಒಂದೇ ಹಾಡಿನಲ್ಲಿ ಕಾಣಬಹುದು.


ಕ್ರಿಕೆಟಿಗ ಅನಿಲ್ ಕುಂಬ್ಳೆ, ಸುಮಲತಾ ಅಂಬರೀಶ್, ಶಿವರಾಜ್ ಕುಮಾರ್, ದರ್ಶನ್, ಪುನೀತ್ ರಾಜಕುಮಾರ್, ರಕ್ಷಿತ್ ಶೆಟ್ಟಿ, ಗಣೇಶ್, ವಿಜಯ್ ಪ್ರಕಾಶ್, ಅನುಶ್ರೀ, ಹರ್ಷಿಕಾ ಪೂಣಚ್ಚ ಸೇರಿದಂತೆ ಸೆಲೆಬ್ರಿಟಿಗಳು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬದಲಾಗು ನೀನು, ಬದಲಾಯಿಸು ನೀನು ಎಂಬ ಹಾಡನ್ನು ಪವನ್ ಒಡೆಯರ್ ನಿರ್ದೇಶಿಸಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಡಿ ಬೀಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಿಚ್ಚ ಸುದೀಪ್ ಬರ್ತ್ ಡೇಗೆ ದಿನ 100: ಈಗಲೇ ಅಭಿಮಾನಿಗಳ ಟ್ರೆಂಡ್ ಶುರು