Select Your Language

Notifications

webdunia
webdunia
webdunia
webdunia

ಹೊಸ ನಿಯಮದ ತಲೆಬಿಸಿಯಲ್ಲಿದ್ದ ಕ್ರಿಕೆಟಿಗರಿಗೆ ಸಮಾಧಾನ ನೀಡಿದ ಅನಿಲ್ ಕುಂಬ್ಳೆ ಹೇಳಿಕೆ

ಹೊಸ ನಿಯಮದ ತಲೆಬಿಸಿಯಲ್ಲಿದ್ದ ಕ್ರಿಕೆಟಿಗರಿಗೆ ಸಮಾಧಾನ ನೀಡಿದ ಅನಿಲ್ ಕುಂಬ್ಳೆ ಹೇಳಿಕೆ
ಮುಂಬೈ , ಸೋಮವಾರ, 25 ಮೇ 2020 (09:18 IST)
ಮುಂಬೈ: ಕೊರೋನಾದಿಂದಾಗಿ ಇನ್ನು ಮುಂದೆ ಕ್ರಿಕೆಟ್ ನಲ್ಲಿ ಚೆಂಡಿಗೆ ಹೊಳಪು ಮೂಡಿಸಲು ಜೊಲ್ಲು ರಸ ಬಳಕೆ ಮಾಡುವುದನ್ನು ನಿಷೇಧಿಸಿದ ಹೊಸ ನಿಯಮ ಬೌಲರ್ ಗಳಿಗೆ ತಲೆನೋವಾಗಿದೆ.


ಜೊಲ್ಲು ರಸದ ಬದಲು ಬೆವರು ಬಳಸಲು ಸೂಚಿಸಲಾಗಿದೆ. ಆದರೆ ಬೆವರು ಚೆಂಡಿಗೆ ಹೊಳಪು ಮೂಡಿಸಲು ಪರಿಹಾರವಾಗದು. ಅದೂ ಅಲ್ಲದೆ, ಇಷ್ಟು ದಿನ ಅಭ್ಯಾಸವಾಗಿ ಹೋಗಿದ್ದ ವಿಚಾರವನ್ನು ಇದ್ದಕ್ಕಿದ್ದಂತೆ ಬಿಡಬೇಕು ಎಂದರೆ ಕಷ್ಟವೇ.

ಹೀಗಾಗಿ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಅನಿಲ್ ಕುಂಬ್ಳೆ ಬೌಲರ್ ಗಳಿಗೆ ಸಮಾಧಾನವಾಗುವ ವಿಚಾರ ಹೇಳಿದ್ದಾರೆ. ಇದು ಮಧ್ಯಂತರ ನಿಯಮವಾಗಿದ್ದು, ಕೊರೋನಾ ಇರುವವರೆಗೆ ಇದನ್ನು ಪಾಲನೆ ಮಾಡಲೇಬೇಕಾಗುತ್ತದೆ. ಅದಾದ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಬರಬಹುದು ಎಂದು ಕುಂಬ್ಳೆ ಸಮಜಾಯಿಷಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಕ್ರಿಕೆಟ್ ಗೆ ರೋಹಿತ್ ಶರ್ಮಾಗೆ ನಾಯಕತ್ವ ನೀಡಲು ಒತ್ತಾಯ