Publish Date: Mon, 25 May 2020 (09:14 IST)
Updated Date: Mon, 25 May 2020 (09:15 IST)
ಮುಂಬೈ: ಟೀಂ ಇಂಡಿಯಾ ಟಿ20 ಕ್ರಿಕೆಟ್ ಮಾದರಿ ಕ್ರಿಕೆಟ್ ಗೆ ರೋಹಿತ್ ಶರ್ಮಾ ನಾಯಕರಾಗಲಿ ಎಂಬ ಒತ್ತಾಯ ಕೇಳಿಬಂದಿದೆ. ಇಂತಹದ್ದೊಂದು ಐಡಿಯಾ ನೀಡಿದವರು ಮಾಜಿ ವೇಗಿ ಅತುಲ್ ವಾಸನ್.
ಟಿ20 ಮಾದರಿಯಲ್ಲಿ ರೋಹಿತ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ನಲ್ಲೂ ನಾಯಕರಾಗಿ ಅವರು ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿ ಭಾರತ ಟಿ20 ಕ್ರಿಕೆಟ್ ತಂಡಕ್ಕೂ ಅವರೇ ನಾಯಕರಾಗಲಿ ಎಂದು ವಾಸನ್ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದರಿಂದ ಕೊಹ್ಲಿ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಕೆಲವೊಮ್ಮೆ ಅವರಿಗೆ ಬಿಡುವು ಸಿಗುತ್ತದೆ. ರೋಹಿತ್ ಕೂಡಾ ಈ ಮಾದರಿಯಲ್ಲಿ ತಾವು ಅದ್ಭುತ ನಾಯಕ ಎಂದು ಸಾಬೀತುಪಡಿಸಿದ್ದಾರೆ ಎಂದು ವಾಸನ್ ಅಭಿಪ್ರಾಯಪಟ್ಟಿದ್ದಾರೆ.