Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಬರ್ತ್ ಡೇಗೆ ದಿನ 100: ಈಗಲೇ ಅಭಿಮಾನಿಗಳ ಟ್ರೆಂಡ್ ಶುರು

ಕಿಚ್ಚ ಸುದೀಪ್ ಬರ್ತ್ ಡೇಗೆ ದಿನ 100: ಈಗಲೇ ಅಭಿಮಾನಿಗಳ ಟ್ರೆಂಡ್ ಶುರು
ಬೆಂಗಳೂರು , ಸೋಮವಾರ, 25 ಮೇ 2020 (09:25 IST)
ಬೆಂಗಳೂರು: ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಕೆಲವು ದಿನಗಳೇ ಮೊದಲೇ ಅಭಿಮಾನಿಗಳು ತಯಾರಿ ಆರಂಭಿಸುತ್ತಾರೆ. ಇದೀಗ ಕಿಚ್ಚ ಸುದೀಪ್ ವಿಚಾರದಲ್ಲೂ ಅಭಿಮಾನಿಗಳು ತಮ್ಮ ಅಭಿಮಾನ ಪ್ರದರ್ಶಿಸುತ್ತಿದ್ದಾರೆ.


ಸುದೀಪ್ ಬರ್ತ್ ಡೇಗೆ 100 ದಿನಗಳ ಮೊದಲೇ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಷ್ ಟ್ಯಾಗ್ ಟ್ರೆಂಡ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ನೆಚ್ಚಿನ ನಟನ ಬರ್ತ್ ಡೇ ಟ್ರೆಂಡ್ ನ್ನು ಸ್ಯಾಂಡಲ್ ವಡ್ ಸ್ಟಾರ್ ಗಳ ಮೂಲಕ ಪ್ರಚಾರ ಮಾಡಿಸುತ್ತಿದ್ದಾರೆ.

#100daysforkicchotsava ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಕಿಚ್ಚನ ಬರ್ತ್ ಡೇ ಸಂಭ್ರಮಕ್ಕೆ ಚಾಲನೆ ನೀಡಲಾಗಿದೆ. ಕಳೆದ ವರ್ಷ ಕಾರಣಾಂತರಗಳಿಂದ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ವರ್ಷವಾದರೂ ತಮ್ಮ ಆರಾಧ‍್ಯದೈವದ ಜತೆ ಬರ್ತ್ ಡೇ ಆಚರಿಸಿಕೊಳ್ಳಬಹುದು ಎಂಬ ವಿಶ್ವಾಸ ಅಭಿಮಾನಿಗಳದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಹಿ ಪ್ರಿಯರಿಗೆ ಸಿಹಿ ಸುದ್ದಿ: ಮುಂದಿನ ವಾರದಿಂದ ಹೊಸ ಕಂತುಗಳು ಶುರು