Publish Date: Mon, 25 May 2020 (09:11 IST)
Updated Date: Mon, 25 May 2020 (09:12 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಧಾರವಾಹಿಗಳ ಹೊಸ ಕಂತುಗಳ ಪ್ರಸಾರ ನೋಡಲು ಸಾಧ‍್ಯವಾಗದೇ ಬೇಸರದಲ್ಲಿದ್ದ ವೀಕ್ಷಕರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ.
ಇಂದಿನಿಂದ ಕಿರುತೆರೆ ಚಟುವಟಿಕೆಗಳು ಗರಿಗೆದರಲಿದ್ದು, ಷರತ್ತಿನೊಂದಿಗೆ ಚಿತ್ರೀಕರಣ ಆರಂಭವಾಗಲಿದೆ. ಸರ್ಕಾರ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಇಂದಿನಿಂದ ಬಹುತೇಕ ಧಾರವಾಹಿ ತಂಡಗಳೂ ಚಿತ್ರೀಕರಣ ಶುರು ಮಾಡಲಿವೆ.
ಮುಂದಿನ ವಾರದಿಂದ ಅಂದರೆ ಜೂನ್ 1 ರಿಂದ ಧಾರವಾಹಿಗಳ ಹೊಸ ಕಂತುಗಳ ಪ್ರಸಾರ ಆರಂಭವಾಗಲಿದೆ. ಈ ಬಗ್ಗೆ ಈಗಾಗಲೇ ಜೀ ಕನ್ನಡ, ಕಲರ್ಸ್ ವಾಹಿನಿ ಪ್ರಕಟಣೆ ನೀಡಿದೆ.