Publish Date: Sun, 24 May 2020 (19:23 IST)
Updated Date: Sun, 24 May 2020 (19:27 IST)
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಶಾಹೀದ್ ಕಪೂರ್ ನಡುವೆ ಏನೋ ನಡೆಯುತ್ತಿದೆ ಎಂದು ವದಂತಿಗಳು ಕೇಳಿಬರುತ್ತಲೇ ಇವೆ.
ಆದರೆ 2013 ರಿಂದಲೂ ಇಂದಿನವರೆಗೆ ನಾನು ಹಾಗೂ ಶಾಹೀದ್ ಒಳ್ಳೆಯ ಗೆಳೆಯರಾಗಿದ್ದೇವೆ ಎಂದು ನಟಿ ಸೋನಾಕ್ಷಿ ಹೇಳಿದ್ದಾರೆ.
ಯಾವಾಗ ಸಿಂಗಲ್ ಆಗಿರುವ ನಟ, ನಟಿ ಜೊತೆಯಾಗಿ ಶೂಟಿಂಗ್ ನಲ್ಲಿ ತೊಡಗುತ್ತಾರೋ ಆಗೆಲ್ಲಾ ಕೆಲವರು ರೂಮರ್ಸ್ ಕ್ರಿಯೇಟ್ ಮಾಡುತ್ತಾರೆ.
ನನ್ನ ಹಾಗೂ ಶಾಹೀದ್ ಕಪೂರ್ ನಡುವೆ ಸಂಬಂಧದ ಬಗ್ಗೆ ಹೇಳೋದು ಫನ್ನಿ ಎನಿಸುತ್ತದೆ ಎಂದು ನಟಿ ಸೋನಾಕ್ಷಿ ಹೇಳಿಕೊಂಡಿದ್ದಾರೆ.