Select Your Language

Notifications

webdunia
webdunia
webdunia
webdunia

ನಿರ್ದೇಶಕನ ಜತೆ ಮದುವೆ ರೂಮರ್ಸ್: ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ ಏನು ಗೊತ್ತಾ?

ನಿರ್ದೇಶಕನ ಜತೆ ಮದುವೆ ರೂಮರ್ಸ್: ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ ಏನು ಗೊತ್ತಾ?
ಹೈದರಾಬಾದ್ , ಶನಿವಾರ, 14 ಮಾರ್ಚ್ 2020 (10:44 IST)
ಹೈದರಾಬಾದ್: ಬಾಹುಬಲಿ ಚೆಲುವೆ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ರೂಮರ್ ಗಳು ಬರುತ್ತಲೇ ಇರುತ್ತವೆ. ಈ ಮೊದಲು ಭಾರತೀಯ ಕ್ರಿಕೆಟಿಗರಿಗೊಬ್ಬರ ಜತೆ ಅನುಷ್ಕಾ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು.


ಅದು ಸುಳ್ಳು ಎಂದು ಸ್ವತಃ ಅನುಷ್ಕಾ ಸ್ಪಷ್ಟಪಡಿಸಿದ್ದರು. ಇದೀಗ ವಿಚ್ಛೇದಿತ ನಿರ್ದೇಶಕರೊಬ್ಬರ ಜತೆಗೆ ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರ ಬಗ್ಗೆ ಅನುಷ್ಕಾ ಪ್ರತಿಕ್ರಿಯೆ ನೀಡಿದ್ದಾರೆ.

ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಪುತ್ರ ಪ್ರಕಾಶ್ ಜತೆ ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿರುವ ಅನುಷ್ಕಾ ‘ಈ ಯಾವ ಸುದ್ದಿಯೂ ನಿಜವಲ್ಲ. ಇಂತಹ ಗಾಳಿ ಸುದ್ದಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ಇವರಿಗೆಲ್ಲಾ ನನ್ನ ಮದುವೆ ವಿಚಾರವೇ ದೊಡ್ಡದಾಗಿರುವುದು ಯಾಕೋ ಗೊತ್ತಿಲ್ಲ. ಮದುವೆ, ಸಂಬಂಧವನ್ನು ಮುಚ್ಚಿಡಲು ಸಾಧ‍್ಯವಿಲ್ಲ. ಇದು ತುಂಬಾ ಸೂಕ್ಷ್ಮ ವಿಚಾರ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ಅನುಷ್ಕಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಬಳಿಕ ಟಾಲಿವುಡ್ ನಲ್ಲಿ ಕನ್ನಡ ನಟ ಜೆಕೆ ಪಯಣ