ರಶ್ಮಿಕಾ ಮಂದಣ್ಣ ಬೋಲ್ಡ್ ಫೋಟೋಗೆ ಕಾಮೆಂಟ್: ಜಿಲ್ಲಾಧಿಕಾರಿಯ ಸ್ಪಷ್ಟನೆ

ಶುಕ್ರವಾರ, 21 ಫೆಬ್ರವರಿ 2020 (08:56 IST)
ಹೈದರಾಬಾದ್: ಭೀಷ್ಮ ಸಿನಿಮಾ ಪ್ರಿ ರಿಲೀಸ್ ಈವೆಂಟ್ ಗೆ ಮುನ್ನ ಬೋಲ್ಡ್ ಡ್ರೆಸ್ ನಲ್ಲಿ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಮಾಡಿ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.

 

ಆದರೆ ಈ ಫೋಟೋಗೆ ತೆಲಂಗಾಣದ ಜಗಿತ್ಯಾಲ ಜಿಲ್ಲಾಧಿಕಾರಿ ರವಿ ಮಾಡಿದ ಕಾಮೆಂಟ್ ನೆಟ್ಟಿಗರ ಕೆಂಗಣ‍್ಣಿಗೆ ಗುರಿಯಾಗಿತ್ತು. ಇದಕ್ಕೀಗ ಅವರೇ ಸ್ಪಷ್ಟನೆ ನೀಡಿದ್ದಾರೆ.

ರಶ್ಮಿಕಾರ ಫೋಟೋ ನೋಡಿ ಡ್ರೆಸ್ ಹರಿದು ಹಾಕಿದೆ ಎನ್ನುವ ಅರ್ಥದಲ್ಲಿ ತೆಲುಗಿನಲ್ಲಿ ಕಾಮೆಂಟ್ ಮಾಡಿದ್ದ ಜಿಲ್ಲಾಧಿಕಾರಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬ ಜಿಲ್ಲಾಧಿಕಾರಿಯಾಗಿ ಇಂತಹ ಕಾಮೆಂಟ್ ಮಾಡುವುದು ನಿಮ್ಮ ಹುದ್ದೆಗೆ ಘನತೆ ತರುತ್ತಾ ಎಂದು ಆಕ್ರೋಶ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ಇದೀಗ ಜಿಲ್ಲಾಧಿಕಾರಿ ರವಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು ನನ್ನ ಖಾತೆ ಹ್ಯಾಕ್ ಮಾಡಿ ಯಾರೋ ಇಂತಹ ಅಸಭ್ಯ ಕಾಮೆಂಟ್ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ. ಘಟನೆ ಬಳಿಕ ಈಗ ಕಾಮೆಂಟ್ ಡಿಲೀಟ್ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಟೀಸರ್ ಇಂದು