ಇನ್ ಸ್ಟಾಗ್ರಾಂನಿಂದ ಹೊರಬಂದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

ಶುಕ್ರವಾರ, 22 ಮೇ 2020 (10:30 IST)
ಕೊಚ್ಚಿ: ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಇದ್ದಕ್ಕಿದ್ದಂತೆ ಇನ್ ಸ್ಟಾಗ್ರಾಂನಿಂದ ಹೊರಬಂದಿದ್ದಾರೆ. ಇದ್ದಕ್ಕಿದ್ದಂತೆ ಹೊರಬರಲು ಕಾರಣವೇನೆಂದು ತಿಳಿದುಬಂದಿಲ್ಲ.


ಇಷ್ಟು ದಿನ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದ ಪ್ರಿಯಾ ಸಿನಿಮಾ, ವೈಯಕ್ತಿಕ ವಿಚಾರಗಳ ಅಪ್ ಡೇಟ್ ಮಾಡುತ್ತಿದ್ದರು. ಆದರೆ ಈಗ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ್ದ ಪ್ರಿಯಾ ವಾರಿಯರ್ ಇದ್ದಕ್ಕಿದ್ದಂತೆ ಇನ್ ಸ್ಟಾಗ್ರಾಂ ಪೇಜ್ ಡಿಲೀಟ್ ಮಾಡಿದ್ದಾರೆ.

ಬಹುಶಃ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದ್ದ ಟ್ರೋಲ್ ಗಳಿಂದ ಬೇಸತ್ತು ಹೊರಬಂದಿರಬಹುದು ಎನ್ನಲಾಗಿದೆ. ಅಂದ ಹಾಗೆ, ಪ್ರಿಯಾ ಈಗ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿರುವ ವಿಷ್ಣು ಪ್ರಿಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜನಪ್ರಿಯ ಧಾರವಾಹಿಗೆ ಕತ್ತರಿ ಹಾಕಿದ ಜೀ ವಾಹಿನಿ