Publish Date: Wed, 13 May 2020 (10:30 IST)
Updated Date: Wed, 13 May 2020 (10:31 IST)
ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವ ಪಾತ್ರದಲ್ಲಿ ಮಿಂಚಿದ್ದ ಪ್ರತಿಭಾವಂತ ನಟ ರಾಣಾ ತಮ್ಮ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಗೆಳತಿ ಮಿಹಿಕಾ ಜತೆಗಿರುವ ಫೋಟೋ ಪ್ರಕಟಿಸಿರುವ ರಾಣಾ ‘ಆಕೆ ಯೆಸ್ ಎಂದಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ. ರಾಣಾ ಮದುವೆ ಸುದ್ದಿ ತಿಳಿಯುತ್ತಿದ್ದಂತೇ ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಹಲವರು ಶುಭಾಷಯಗಳ ಮಹಾಪೂರವೇ ಹರಿಸಿದ್ದಾರೆ.