Publish Date: Fri, 08 May 2020 (10:50 IST)
Updated Date: Fri, 08 May 2020 (10:51 IST)
ಬೆಂಗಳೂರು: ಕೆಜಿಎಫ್, ಉಗ್ರಂ ಸಿನಿಮಾ ಖ‍್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಈಗ ಬೇರೆ ಭಾಷೆಯ ನಾಯಕರನ್ನೂ ಸೆಳೆಯುತ್ತಿದ್ದಾರೆ. ಇದೀಗ ಬಂದ ಸುದ್ದಿಯ ಪ್ರಕಾರ ಪ್ರಶಾಂತ್ ಮುಂದಿನ ಸಿನಿಮಾ ತೆಲುಗು ಸ್ಟಾರ್ ಜ್ಯೂ.ಎನ್ ಟಿಆರ್ ಜತೆಗಂತೆ!
ಎನ್ ಟಿಆರ್ ಆರ್ಟ್ಸ್ ಮತ್ತು ಮೈತ್ರಿ ಮೂವೀಸ್ ಸಹಭಾಗಿತ್ವದಲ್ಲಿ ಮೂಡಿಬರಲಿರುವ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಜ್ಯೂ. ಎನ್ ಟಿಆರ್ ನಾಯಕರಾಗಲಿದ್ದಾರಂತೆ.
ಸದ್ಯಕ್ಕೆ ಕೆಜಿಎಫ್ 2 ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ಅದಾದ ಬಳಿಕ ಈ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.