ಕಾಲೇಜು ಹುಡ್ಗನ ಪಾತ್ರ ಮಾಡಿ ಎಂದ ಉಪೇಂದ್ರಗೆ ಗೀತಾ ಬೈತಾಳೆ ಎಂದ ಶಿವಣ್ಣ!

ಬುಧವಾರ, 20 ಮೇ 2020 (09:39 IST)
ಬೆಂಗಳೂರು: ಓಂ ಚಿತ್ರಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫೇಸ್ ಬುಕ್ ಲೈವ್ ಬಂದು ಮಾತುಕತೆ ನಡೆಸಿದ್ದಾರೆ.


ಈ ವೇಳೆ ಓಂ ಸಿನಿಮಾ ಶೂಟಿಂಗ್ ದಿನಗಳನ್ನು ನೆನೆಸಿಕೊಂಡ ಇಬ್ಬರೂ ಅಂತಹ ಒಂದು ಸಿನಿಮಾ ನಮ್ಮಿಂದ ಅದು ಹೇಗೋ ಆಯ್ತು. ಇನ್ನೊಂದು ಸಿನಿಮಾ ಅದೇ ರೀತಿಯಲ್ಲಿ ನಮಗೆ ಮಾಡಲು ಸಾಧ್ಯವಾಗದು ಎಂದು ಹೇಳಿದರು.

ಈ ವೇಳೆ ಶಿವಣ್ಣ ಎನರ್ಜಿ ಬಗ್ಗೆ ಮಾತನಾಡಿದ ಉಪೇಂದ್ರ ನೀವು ಮತ್ತೆ ಕಾಲೇಜು ಹೀರೋ ಆಗಿ ಪಾತ್ರ ಮಾಡಬಹುದು. ಅಷ್ಟು ಯಂಗ್ ಆಗಿ ಇದ್ದೀರಾ ಎಂದು ಕಾಲೆಳೆದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್ ‘ಹೇ.. ಇಲ್ಲಪ್ಪಾ. ನಾನೀಗ ಕಾಲೇಜು ಹೀರೋ ಪಾತ್ರ ಮಾಡಿದ್ರೆ ಪತ್ನಿ ಗೀತಾ ಬೈತಾಳೆ. ನನಗೆ ಆಗಲೇ ಅಳಿಯನೂ ಬಂದಾಯ್ತು’ ಎಂದಿದ್ದಾರೆ.  ಜತೆಗೆ ಮುಂದಿನ ವಾರವೇ ಓಂ ಟೀಂ ಜತೆಗೆ ಎಲ್ಲರೂ ಬಂದು ಅಭಿಮಾನಿಗಳ ಜತೆ ಮಾತನಾಡೋಣ ಎಂದೂ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಗಳಿಗೆ ಕಿಚ್ಚ ಸುದೀಪ್ ಬರೆದ ಭಾವುಕ ಸಂದೇಶ